Bible Quiz in Kannada Topic wise: 98 || ಕನ್ನಡ ಬೈಬಲ್ ಕ್ವಿಜ್ (ಹೊಸ ಒಡಂಬಡಿಕೆಯ ಭೌಗೋಳಿಕ ಪ್ರಶ್ನೆಗಳು)

1. ಯೇಸು ಸ್ವರ್ಗಾರೋಹಣ ಮಾಡಿದ ಸ್ಥಳ ಯಾವದು?
A. ಜಾಲಿ ಮರಗಳ ಗುಡ್ಡ
B. ಎಣ್ಣೆ ಮರಗಳ ಗುಡ್ಡ
C. ಖರ್ಜೂರ ಮರಗಳ ಗುಡ್ಡ
D. ಆಲದ ಮರಗಳ ಗುಡ್ಡ
2. ಪೇತ್ರ, ಯೋಹಾನರು ಎಲ್ಲಿಗೆ ಹೋಗುತ್ತಿದ್ದಾಗ ಹುಟ್ಟು ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ನೋಡಿದರು?
A. ನ್ಯಾಯಸ್ಥಾನಕ್ಕೆ
B. ಕಛೇರಿಗೆ
C. ಕೊಪೆರ್ನೌಮೆಗೆ
D. ದೇವಾಲಯಕ್ಕೆ
3. ಯೇಸು ಮತ್ತು ಆತನ ಶಿಷ್ಯರು ಹಾದುಹೋಗುತ್ತಿದ್ದಾಗ ಏನನ್ನು ತಿನ್ನುತ್ತಿದ್ದರು?
A. ಅಂಜೂರದ ಹಣ್ಣನ್ನು
B. ಜೋಳಗಳನ್ನು
C. ತೆನೆಗಳನ್ನು
D. ಕಬ್ಬುಗಳನ್ನು
4. ಫಿಲಿಪ್ಪನು ಎಲ್ಲಿಗೆ ಹೋಗಿ ಸುವಾರ್ತೆ ಸಾರಿದನು?
A. ನಜರೇತಿಗೆ
B. ಗಲಿಲಾಯಕ್ಕೆ
C. ಕೊಪೆರ್ನೌಮಿಗೆ
D. ಸಮಾರ್ಯಕ್ಕೆ
5. ಸುವಾರ್ತೆಯನ್ನು ಕೇಳಿ ಕೆಲವರು ತಮ್ಮ ಮಾಟಮಂತ್ರಗಳ ಪುಸ್ತಕಗಳನ್ನು ಎಲ್ಲಿ ಸುಟ್ಟುಹಾಕಿದರು?
A. ಎಫೆಸ ಪಟ್ಟಣದಲ್ಲಿ
B. ಕೊಲೆಸ್ಸ ಪಟ್ಟಣದಲ್ಲಿ
C. ಕೊರಿಂಥ ಪಟ್ಟಣದಲ್ಲಿ
D. ಫಿಲಿಪ್ಪ ಪಟ್ಟಣದಲ್ಲಿ
6. ಸೌಲನು (ಪೌಲನು) ರಕ್ಷಣೆ ಹೊಂದಿದ ಮೇಲೆ ಮೊದಲು ದಮಸ್ಕದಲ್ಲಿ ಸುವಾರ್ತೆ ಸಾರಿದನು. ನಂತರ ಅವನು ಎಲ್ಲಿಗೆ ಹೋದನು?
A. ಯೂದಾಯಕ್ಕೆ
B. ಯೆರೂಸಲೇಮಿಗೆ
C. ಗ್ರೀಕ್ ಗೆ
D. ಸಮಾರ್ಯ
7. ಪೇತ್ರನು ಯೇಸುವಿನ ಹೆಸರಿನಲ್ಲಿ ಎಂಟು ವರ್ಷಗಳಿಂದ ಹಾಸಿಗೆಯಲ್ಲಿದ್ದ ಐನೇಯನನ್ನು ಯಾವ ಸ್ಥಳದಲ್ಲಿ ಗುಣಪಡಿಸಿದನು?
A. ಲುದ್ದದಲ್ಲಿ
B. ದಮಸ್ಕದಲ್ಲಿ
C. ತಾರ್ಷೀಷಿನಲ್ಲಿ
D. ಕಾನಾನಿನಲ್ಲಿS
8. ಪೇತ್ರನು ಯಾವ ಪಟ್ಟಣದಲ್ಲಿ ತಬಿಥಾ (ದೊರ್ಕ)ಳನ್ನು ಸತ್ತವರೊಳಗಿಂದ ಎಬ್ಬಿಸಿದನು?
A. ಕಾನಾನಿನಲ್ಲಿ
B. ಲುದ್ದದಲ್ಲಿ
C. ಯೊಪ್ಪದಲ್ಲಿ
D. ದಮಸ್ಕದಲ್ಲಿ
9. ಪೇತ್ರನು ಕೊರ್ನೇಲ್ಯನ ಮನೆಯಲ್ಲಿ ಪ್ರಸಂಗ ಮಾಡಿದಾಗ ಯೇಸು ತನ್ನ ಸುವಾರ್ತೆಯನ್ನು ಎಲ್ಲಿ ಸಾರಿದನೆಂಬುದನ್ನು ತಿಳಿಸಿದನು?
A. ಯೆಹೂದ್ಯರ ಸೀಮೆಯಲ್ಲಿ ಮತ್ತು ಗಲಿಲಾಯದಲ್ಲಿ
B. ಯೆಹೂದ್ಯರ ಸೀಮೆಯಲ್ಲಿ ಮತ್ತು ಯೆರೂಸಲೇಮಿನಲ್ಲಿ
C. ಯೆಹೂದ್ಯರ ಸೀಮೆಯಲ್ಲಿ ಮತ್ತು ಸಮಾರ್ಯದಲ್ಲಿ
D. ಯೆಹೂದ್ಯರ ಸೀಮೆಯಲ್ಲಿ ಮತ್ತು ಕೊಲೆಸ್ಸದಲ್ಲಿ
10. ಅಪೋಸ್ತಲರ ಬೋಧನೆ ಕೇಳಿದ ಮೇಲೆ ಯಾವ ಊರಿನವರು ಅವರು ಹೇಳಿದ ಮಾತು ಹೌದೋ ಇಲ್ಲವೋ ಎಂದು ಶಾಸ್ತ್ರ ಗ್ರಂಥಗಳನ್ನು ಶೋಧಿಸುತ್ತಿದ್ದರು?
A. ಬಾಬೆಲಿನಲ್ಲಿ
B. ಬೆತಸ್ಥಾದಲ್ಲಿ
C. ಬೆರೋಯದಲ್ಲಿ
D. ಬೆಥಾನ್ಯದಲ್ಲಿ
Result: