Bible Quiz in Kannada Topic wise: 58 || ಕನ್ನಡ ಬೈಬಲ್ ಕ್ವಿಜ್ (ಬೆಂಕಿ (ಅಗ್ನಿ))

1. ದೇವರು ತನ್ನ ಪ್ರವಾದಿಯ ಪ್ರಾರ್ಥನೆ ಕೇಳಿ ಬೆಟ್ಟದ ಮೇಲೆ ಬೆಂಕಿ ಸುರಿಸಿದನು. ಆ ಪ್ರವಾದಿ ಯಾರು? ಈ ಘಟನೆ ಎಲ್ಲಿ ಸಂಭವಿಸಿತು?
A. ಎಲೀಯನು ಸಿನಾಯ್ ಬೆಟ್ಟದ ಮೇಲೆ
B. ಎಲೀಯನು ಚಿಯೋನ್ ಬೆಟ್ಟದ ಮೇಲೆ
C. ಎಲೀಯನು ಕರ್ಮೆಲ್ ಬೆಟ್ಟದ ಮೇಲೆ
D. ಎಲೀಯನು ಗೊಲ್ಗೊಥಾ ಬೆಟ್ಟದ ಮೇಲೆ
2. ಸೊಲೋಮೋನನು ದೇವಾಲಯ ಪ್ರತಿಷ್ಟೆ ಮಾಡಿದಾಗ ದೇವರು ಯಾವ ರೀತಿಯಲ್ಲಿ ಸರ್ವಾಂಗ ಹೋಮವನ್ನು ಅಂಗೀಕರಿಸಿದನು?
A. ಆಕಾಶದಿಂದ ಬೆಂಕಿ ಬಿತ್ತು
B. ಆಕಾಶದಿಂದ ಸುರಿಮಳೆ ಬಿತ್ತು
C. ಆಕಾಶದಿಂದ ಲಾವಕ್ಕಿ ಬಿತ್ತು
D. ಬಿರುಗಾಳಿ ತುಂಬಿತ್ತು
3. ದೇವರು ಸೋದೋಮ್ ಗೊಮೋರ್ ನಗರಿಗಳನ್ನು ಯಾವ ರೀತಿಯಲ್ಲಿ ನಾಶ ಮಾಡಿದನು?
A. ಅಗ್ನಿಗಂಧಕಗಳ ಮೂಲಕ
B. ಭಯಾನಕ ರೋಗಗಳ ಮೂಲಕ
C. ಕ್ಷಾಮದ ಮೂಲಕ
D. ಜಲಪ್ರಳಯದ ಮೂಲಕ
4. ಮೋಶೆಗೆ ಉರಿಯುತ್ತಿದ್ದರೂ ಸುಟ್ಟು ಹೋಗದೆ ಇದ್ದದ್ದು ಕಾಣಿಸಿತು. ಅದು ಯಾವದು?
A. ಮುಳ್ಳಿನ ಪೊದೆಯಲ್ಲಿ ಉರಿಯುವ ಬಟ್ಟೆ
B. ಮುಳ್ಳಿನ ಪೊದೆಯಲ್ಲಿ ಉರಿಯುವ ಕೋಲು
C. ಮುಳ್ಳಿನ ಪೊದೆಯಲ್ಲಿ ಉರಿಯುವ ಬೆಂಕಿ
D. ಮುಳ್ಳಿನ ಪೊದೆಯಲ್ಲಿ ಉರಿಯುವ ಗುಡಿಸಲಿ
5. ಪಂಚಾಶತ್ತಮ ಹಬ್ಬದ ದಿವಸ ಯೇಸುವಿನ ಶಿಷ್ಯರ ಮೇಲೆ ಏನು ಕೂತುಕೊಂಡವು?
A. ಉರಿಯೆದ್ದ ಕಾಲುಗಳು
B. ಉರಿಯೆದ್ದ ನಾಲಗೆಗಳು
C. ಉರಿಯೆದ್ದ ಕಿವಿಗಳು
D. ಉರಿಯೆದ್ದ ಕೈಗಳು
6. ಕ್ರೈಸ್ತರ ವಿಶ್ವಾಸವನ್ನು ಬಂಗಾರದಂತೆ ಮಾಡುವುದು ಯಾವುದು?
A. ಬೆಂಕಿಯಲ್ಲಿ ಪುಟ ಹಾಕಿ ಶೋಧಿಸುವದರ ಮೂಲಕ
B. ಬೆಂಕಿಯಲ್ಲಿ ಕುದಿಸುವ ನೀರನ್ನು ಶೋಧಿಸುವದರ ಮೂಲಕ
C. ನೀರಿನಲ್ಲಿ ಮುಳುಗಿಸುವ ಅಳತೆಯ ಮೂಲಕ
D. ನೀರಿನಲ್ಲಿ ತೆಗೆದುಕೊಳ್ಳುವ ದೀಕ್ಷಾಸ್ನಾನದ ಮೂಲಕ
7. ಇಸ್ರಾಯೇಲ್ಯರು ಐಗುಪ್ತ ದೇಶದಿಂದ ಹೊರಟು ಪ್ರಯಾಣ ಮಾಡುತ್ತಿದ್ದಾಗ ದೇವರು ರಾತ್ರಿಯ ವೇಳೆಯಲ್ಲಿ ಅವರಿಗೆ ಹೇಗೆ ಬೆಳಕು ಕೊಟ್ಟನು?
A. ಬಾಗಾರ ಸ್ತಂಭದ ಮೂಲಕ
B. ಮೇಘ ಸ್ತಂಭದ ಮೂಲಕ
C. ಅಗ್ನಿ ಸ್ತಂಭದ ಮೂಲಕ
D. ಜಲ ಸ್ತಂಭದ ಮೂಲಕ
8. ಕ್ರೈಸ್ತರು ಅನುಭವಿಸುವ ಹಿಂಸೆಗೆ ಪೇತ್ರನು ಯಾವ ಹೆಸರನ್ನು ಕೊಟ್ಟಿದ್ದಾನೆ?
A. ಪರಿಶೋಧನೆಗಾಗಿ ಖರ್ಚುಮಾಡುವದು
B. ಪರಿಶೋಧನೆಗಾಗಿ ಸಹಾಯ ಬೇಡುವುದು
C. ಪರಿಶೋಧನೆಗಾಗಿ ಕಷ್ಟ ಪಡುವುದು
D. ಪರಿಶೋಧನೆಗಾಗಿ ಪುಟಕ್ಕೆ ಹಾಕಲ್ಪಡುವದು
9. ಯಾರು ಯೇಸು ಕ್ರಿಸ್ತನನ್ನು ನಂಬುವದಿಲ್ಲವೋ ಅಂಥವರಿಗೆ ದೇವರು ಎಂಥಾ ಬೆಂಕಿಯ ಮೂಲಕ ಶಿಕ್ಷೆ ವಿಧಿಸುತ್ತಾನೆ?
A. ಉರಿಯುವ ಬೆಂಕಿಯಲ್ಲಿ
B. ಆರಿದ ಬೆಂಕಿಯಲ್ಲಿ
C. ಆರದ ಬೆಂಕಿಯಲ್ಲಿ
D. ಬೆಳಗುವ ಬೆಂಕಿಯಲ್ಲಿ
10. ಸೈತಾನನನ್ನು ಎಂಥಾ ಕೆರೆಗೆ ದೊಬ್ಬುತ್ತಾರೆ?
A. ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ
B. ಆಪುಗಳುರಿಯುವ ಕೆರೆಯಲ್ಲಿ
C. ಬೆಳ್ಳಿಗಳುರಿಯುವ ಕೆರೆಯಲ್ಲಿ
D. ಬಂಗಾರಗಳುರಿಯುವ ಕೆರೆಯಲ್ಲಿ
Result: