Bible Quiz in Kannada Topic wise: 67 || ಕನ್ನಡ ಬೈಬಲ್ ಕ್ವಿಜ್ (ಮೊದಲಿನವರಾರು?)

1. ಮೊದಲನೆಯ ದಶಾಂಶವನ್ನು ಯಾರು ಸ್ವೀಕರಿಸಿದರು?
ಅ] ಅಬ್ರಹಾಮನು
ಬ] ಆದಾಮನು
ಕ] ಹೇಬೇಲನು
ಡ] ಮೆಲ್ಕೀಜೆದೇಕನು
2. ಮೊದಲನೆಯ ಅವಳಿ-ಜವಳಿ ಮಕ್ಕಳಿಗೆ ಯಾರು ಜನ್ಮಕೊಟ್ಟರು?
ಅ] ರಾಹೇಲಳು
ಬ] ರೆಬೆಕ್ಕಳು
ಕ] ಹವ್ವಳು
ಡ] ಹಾಗರಳು
3. ಸಾವಿಗಿಂತ ಮುಂಚಿತವಾಗಿ ಸ್ವರ್ಗಕ್ಕೆ ಹೋದ ಮೊದಲನೇ ವ್ಯಕ್ತಿ ಯಾರು?
ಅ] ಹನೋಕನು
ಬ] ಎಲೀಯನು
ಕ] ಯೇಸು
ಡ] ದಾನಿಯೇಲನು
4. ಕೊಲೆಯಾದ ಮೊದಲನೇ ವ್ಯಕ್ತಿ ಯಾರು?
ಅ] ಕಾಯಿನನು
ಬ] ಹೆಬೇಲನು
ಕ] ಹವ್ವಳು
ಡ] ಆದಾಮನು
5. ಮೊದಲನೇ ಯುದ್ಧವು ಯಾವ ಸ್ಥಳದಲ್ಲಾಯಿತು?
ಅ] ಲವಣ ಸಮುದ್ರವಾಗಿರುವ ಸಿದ್ದೀಮ್ ತಗ್ಗಿನಲ್ಲಿ
ಬ] ಬಾಬೇಲ್ ಗೋಪುರ
ಕ] ನೈಲ್ ನದಿಯ ದಂಡೆ
ಡ] ಯೋರ್ದನ್ ನದಿಯ ದಂಡೆಯ ಮೇಲೆ
6. ಯಾವ ಪ್ರಾಣಿಯನ್ನು ಮೊದಲನೇ ಕಾಣಿಕೆಯಾಗಿ ದೇವರಿಗೆ ಹೋಮ ಮಾಡಿದನು?
ಅ] ಮೇಕೆ
ಬ] ಹಸು
ಕ] ಕುರಿ
ಡ] ಪಾರಿವಾಳ
7. ಇಸ್ರಾಯೇಲಿನ ಮೊದಲನೆಯ ಅರಸು ಯಾರು?
ಅ] ಸೌಲನು
ಬ] ದಾವೀದನು
ಕ] ಸೊಲೊಮೋನನು
ಡ] ಮೇಲಿನವರು ಯಾರೂ ಅಲ್ಲ
8. ಐಗುಪ್ತ ದೇಶದ ಮೇಲೆ ದೇವರು ಯಾವ ಮೊದಲನೆಯ ವ್ಯಾಧಿಯನ್ನು ಬರುವಂತೆ ಮಾಡಿದನು?
ಅ] ಕಪ್ಪೆಗಳು
ಬ] ಹೇನು
ಕ] ವಿಷದ ಹುಳುಗಳು
ಡ] ನೀರು ರಕ್ತವಾದದ್ದು
9. ಈ ಕೆಳಗಿನವುಗಳಲ್ಲಿ ಯೇಸು ಮಾಡಿದ ಮೊದಲನೆಯ ಅದ್ಭುತ ಕಾರ್ಯ ಯಾವುದು?
ಅ] ಕುಷ್ಟ ರೋಗಿಯನ್ನು ಸ್ವಸ್ಥ ಮಾಡಿದ್ದು
ಬ] ಯೆರಿಕೋ ಬಳಿ ಕುರುಡನನ್ನು
ಕ] ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು
ಡ] ಬಿರುಗಾಳಿಯನ್ನು ಶಾಂತಗೊಳಿಸಿದ್ದು
10. ಕ್ರೈಸ್ತ ಸಭೆಯ ಮೊದಲನೆಯ ರಕ್ತ ಸಾಕ್ಷಿ ಯಾರು?
ಅ] ಪೇತ್ರನು
ಬ] ಸ್ತೆಫನು
ಕ] ಪೌಲನು
ಡ] ಯೋಹಾನನು
Result: