Bible Quiz in Kannada Topic wise: 74 || ಕನ್ನಡ ಬೈಬಲ್ ಕ್ವಿಜ್ (ಯೇಸು ಕ್ರಿಸ್ತನು)

1. ಯೇಸು ಹುಟ್ಟಿದ್ದು ಎಲ್ಲಿ?
A. ಕಾನಾನಿನಲ್ಲಿ
B. ಗಲಿಲಾಯದಲ್ಲಿ
C. ಬೆತ್ಲೆಹೇಮಿನಲ್ಲಿ
D. ಸಮಾರ್ಯದಲ್ಲಿ
2. ಯೇಸುವಿನ ಜನನದ ವಿಷಯ ಮೊದಲು ಕೇಳಿಸಿಕೊಡವರು ಯಾರು?
A. ಜೋಯಿಸರು
B. ಕುರುಬರು
C. ಪಂಡಿತರು
D. ಹೆರೋದನು
3. ಆ ವಿಷಯವನ್ನು ಅವರಿಗೆ ತಿಳಿಸಿದವರು ಯಾರು?
A. ಪಂಡಿತರು
B. ಕುರುಬರು
C. ಜೋಯಿಸರು
D. ದೇವದೂತರು
4. ಮೂಡಣ ದೇಶದ ಜೋಯಿಸರು ಯಾರು?
A. ಯಾಜಕರು
B. ಪಂಡಿತರು
C. ಶಾಸ್ತ್ರಿಗಳು
D. ಕುರುಬರು
5. ಶಿಶುವಾದ ಯೇಸುವನ್ನು ನೋಡಲು ಎಷ್ಟು ಜನ ಜೋಯೀಸರು ಬಂದರು?
A. ಬೈಬಲ್ಲಿನಲ್ಲಿ ಅವರ ಸಂಖ್ಯೆ ಬರೆದಿಲ್ಲ
B. ಬೈಬಲ್ಲಿನಲ್ಲಿ ಅವರ ಸಂಖ್ಯೆ ಆರು ಎಂದು ಬರೆದಿದೆ
C. ಬೈಬಲ್ಲಿನಲ್ಲಿ ಅವರ ಸಂಖ್ಯೆ ಏಳು ಎಂದು ಬರೆದಿದೆ
D. ಬೈಬಲ್ಲಿನಲ್ಲಿ ಅವರ ಸಂಖ್ಯೆ ಇಬ್ಬರು ಎಂದು ಬರೆದಿದೆ
6. ಜೋಯಿಸರು ಯೇಸುವಿಗಾಗಿ ಯಾವ ಕಾಣಿಕೆಗಳನ್ನು ತಂದರು?
A. ಬಂಗಾರ, ಧೂಪ
B. ಬಂಗಾರ, ಧೂಪ, ರಕ್ತಬೋಳ
C. ಬಂಗಾರ
D. ರಕ್ತಬೋಳ
7. ಶಿಶುವಾದ ಯೇಸುವನ್ನು ಯಾವ ರಾಜನು ಕೊಲ್ಲಲು ಯತ್ನಿಸಿದನು
A. ಹೆರೋದನು
B. ಅಹಾಬನು
C. ಎಲ್ಕಾನನು
D. ಸೇತಾನನು
8. ಯೇಸು ತನ್ನ ಬಾಲ್ಯ ಪ್ರಾಯವನ್ನು ಎಲ್ಲಿ ಕಳೆದನು?
A. ನಜರೇತಿನಲ್ಲಿ
B. ಬೆತ್ಲೇಹೇಮಿನಲ್ಲಿ
C. ಯೆರೂಸಲೇಮಿನಲ್ಲಿ
D. ಸಮಾರ್ಯದಲ್ಲ
9. ಯೇಸು 30 ವರ್ಷ ವಯಸ್ಸಿನವನಾಗುವವರೆಗೂ ಯಾವ ಕೆಲಸ ಮಾಡುತ್ತಿದ್ದನು?
A. ರೈತನ ಕೆಲಸ
B. ಕುರುಬನ ಕೆಲಸ
C. ಬಡಗಿಯ ಕೆಲಸ
D. ವ್ಯಾಪಾರಿಯ ಕೆಲಸ
10. ಯೇಸು ಎಷ್ಟು ವರ್ಷಗಳು ಸೇವೆ ಮಾಡಿದನು?
A. 30 ವರ್ಷಗಳು
B. 40 ವರ್ಷಗಳು
C. 60 ವರ್ಷಗಳು
D. 25 ವರ್ಷಗಳು
11. ಯೇಸುವಿಗೆ ದೀಕ್ಷಾಸ್ನಾನ ಕೊಟ್ಟವರು ಯಾರು?
A. ಪೇತ್ರನು
B. ಯೋಹಾನನು
C. ಯೂದನು
D. ಸ್ನಾನಿಕನಾದ ಯೋಹಾನನು
12. ಯೇಸು ತನ್ನ ಪ್ರಥಮ ಸೂಚಕ ಕಾರ್ಯವನ್ನೆಲ್ಲಿ ಮಾಡಿದನು?
A. ಸಮಾರ್ಯದಲ್ಲಿ
B. ಗೊಲ್ಕೊಥಾದಲ್ಲಿ
C. ರೋಮಿನಲ್ಲಿ
D. ಕಾನಾನಿನಲ್ಲಿ
13. ಯೇಸುವಿನ ಸರ್ವೋತ್ಕೃಷ್ಟ ಉಪದೇಶದ ಹೆಸರೇನು?
A. ಪರ್ವತ ಪ್ರಸಂಗ
B. ನದಿಯ ದಡದ ಪ್ರಸಂಗ
C. ಬೀಜ ಬಿತ್ತುವ ಪ್ರಸಂಗ
D. ಸಾಮ್ಯದ ಪ್ರಸಂಗ
14. ಯೇಸುವಿಗೆ ದ್ರೋಹ ಮಾಡಿದವರು ಯಾರು?
A. ಯೋಹಾನನು
B. ಇಸ್ಕರಿಯೋತ ಯೂದನು
C. ಪೇತ್ರನು
D. ಅಂದ್ರೇಯನು
15. ಶುಭ ಶುಕ್ರವಾರ ಅಂದರೇನು?
A. ಯೇಸು ಹುಟ್ಟಿದ ದಿನ
B. ಯೇಸು ಸ್ವರ್ಗಾರೋಹಣದ ದಿನ
C. ಯೇಸು ಪುನರುತ್ಥಾನದ ದಿನ
D. ಯೇಸು ಮೃತಪಟ್ಟ ದಿನ
16. ಯೇಸುವನ್ನು ಸಮಾಧಿ ಮಾಡಲು ತನ್ನ ಹೊಸ ಸಮಾಧಿಯನ್ನು ಕೊಟ್ಟವರು ಯಾರು?
A. ಅರಿಮಥಾಯದ ಯೋಸೇಫನು
B. ಫಿಲಾತನು
C. ಫಿಲಿಪ್ಪಯನು
D. ಫಿಲೋಮೊನನು
17. ಯೇಸುವಿನ ಸಮಾಧಿಗೆ ಸಬ್ಬತ್ ದಿನ ಯಾರೂ ಹೋಗಲಿಲ್ಲ ಯಾಕೆ?
A. ಯಾಕೆಂದರೆ ಅದು ಭಯದ ದಿನವಾಗಿತ್ತು
B. ಯಾಕೆಂದರೆ ಅದು ಮರಣದ ದಿನವಾಗಿತ್ತು
C. ಯಾಕೆಂದರೆ ಅದು ವಿಶ್ರಾಂತಿಯ ದಿನವಾಗಿತ್ತು
D. ಯಾಕೆಂದರೆ ಅದು ಶ್ರಮದ ದಿನವಾಗಿತ್ತು
18. ಯೇಸುವಿನ ಸಮಾಧಿಗೆ ಪುನರುತ್ಥಾನದ ದಿನ ಓಡಿದ ಶಿಷ್ಯರ ಹೆಸರೇನು?
A. ಪೇತ್ರ ಯೋಹಾನರು
B. ಪೇತ್ರ ಯಾಕೋಬರು
C. ಪೇತ್ರ ಅಂದ್ರೇಯರು
D. ಪೇತ್ರ ಮತ್ತಾಯರು
19. ಪುನರುತ್ಥಾನವಾದ ಯೇಸುವನ್ನು ಮೊದಲು ನೋಡಿದವರು ಯಾರು?
A. ಯೇಸುವಿನ ತಾಯಿಯಾದ ಮರಿಯಳು
B. ರೂತಳು
C. ಮಾರ್ಥಳು
D. ಮಗ್ದಲದ ಮರಿಯಳು
20. ಯಾವ ಶಿಷ್ಯನು ಯೇಸುವಿನ ಪುನರುತ್ಥಾನದ ವಿಷಯದಲ್ಲಿ ಸಂಶಯ ಪಟ್ಟನು?
A. ಯೂದನು
B. ಪೇತ್ರನು
C. ತೋಮನು
D. ಯೋಹಾನನು
Result: