Bible Quiz in Kannada Topic wise: 37 || ಕನ್ನಡ ಬೈಬಲ್ ಕ್ವಿಜ್ (ನಾಲಿಗೆ)

1. ನಾಲಿಗೆಗ ಕಡಿವಾಣ ಹಾಕಬೇಕೆಂದು ಹೊಸ ಒಡಂಬಡಿಕೆಯಲ್ಲಿರುವ ಯಾವ ಪುಸ್ತಕದಲ್ಲಿ ಬರೆದಿದೆ?
A. ಇಬ್ರಿಯದವರ ಪತ್ರಿಕೆಯಲ್ಲಿ
B. ಯಾಕೋಬನ ಪತ್ರಿಕೆಯಲ್ಲಿ
C. ಲೂಕನ ಪತ್ರಿಕೆಯಲ್ಲಿ
D. ರೋಮಾಪುರದವರ ಪತ್ರಿಕೆಯಲ್ಲಿ
2. ಹಳೆಯ ಒಡಂಬಡಿಕೆಯಲ್ಲಿ ಯಾವ ಮಹಾಪುರುಷನು, “ನಾನು ವಾಕ್ಚಾತುರ್ಯವಿಲ್ಲದವನು, ನನ್ನ ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು?
A. ಮೋಶೆ
B. ನೋಹ
C. ಯೆಹೋಶುವ
D. ಆರೋನ
3. ಹೊಸ ಒಡಂಬಡಿಕೆಯಲ್ಲಿ ಯಾವ ಯಾಜಕನು ದೇವದೂತನು ಹೇಳಿದ ಮಾತನ್ನು ನಂಬದೇ ಹೋದದ್ದರಿಂದ ಸ್ವಲ್ಪ ದಿನದ ವರೆಗೆ ಮೂಕನಾಗಿ ಮಾತನಾಡಲಾರದೇ ಹೋದನು?
A. ಜೆಕರ್ಯ
B. ಜೆಬದಾಯ
C. ಜಕರೀಯ
D. ಸಿಮೆಯೋನ‌
4. ಅಪೋಸ್ತಲರ ಮೇಲೆ ಪವಿತ್ರಾತ್ಮನು ಉರಿಯಂತಿದ್ದ ನಾಲಿಗೆಗಳ ಹಾಗೆ ಅವರ ಮೇಲೆ ಒಂದೊಂದಾಗಿ ಯಾವ ದಿನದಲ್ಲಿ ಕೂತುಕೊಂಡವು?
A. ಪುನರುತ್ಥಾನ ಹಬ್ಬದ ದಿನ
B. ಪಂಚಾಶತ್ತಮ ಹಬ್ಬದ ದಿನ
C. ಪಸ್ಕ ಹಬ್ಬದ ದಿನ
D. ಶುಭ ಶುಕ್ರವಾರ ಹಬ್ಬದ ದಿನ
5. ತೊದಲು ಮಾತಾಡುತ್ತಿದ್ದ ಒಬ್ಬ ಕಿವುಡನ ನಾಲಿಗೆಯನ್ನು ಮುಟ್ಟಿ ಗುಣಪಡಿಸಿದವರು ಯಾರು?
A. ಯೇಸು
B. ಪೇತ್ರ
C. ಮತ್ತಾಯ
D. ಯೋಹಾನ
6. ದೇವರು ಮನುಷ್ಯರ ಭಾಷೆಯನ್ನು ಎಲ್ಲಿ ತಾರುಮಾರು ಮಾಡಿದನು?
A. ಬ್ರೆಜಿಲ್ ನಲ್ಲೊ
B. ಬಾಬೇಲಿನಲ್ಲಿ
C. ಬೆತೇಲಿನಲ್ಲಿ
D. ಬೆತ್ಲೇಹೇಮಿನಲ್ಲಿ
7. “ಅವನು ತನ್ನ ತುದಿ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ” ಎಂದು ಯಾರು ಯಾರಿಗೆ ಕೇಳಿಕೊಂಡರು?
A. ಐಶ್ವರ್ಯವಂತನು ಭಿಕ್ಷುಕನನ್ನು
B. ಭಿಕ್ಷುಕನು ಐಶ್ವರ್ಯವಂತನನ್ನು
C. ಭಿಕ್ಷುಕನು ದೇವರನ್ನು
D. ಐಶ್ವರ್ಯವಂತನು ದೇವರನ್ನು
8. ಜ್ಞಾನೋಕ್ತಿಗಳ ಪುಸ್ತಕದಲ್ಲಿ ಶಿಷ್ಟರ ನಾಲಿಗೆಯನ್ನು ಯಾವದಕ್ಕೆ ಹೋಲಿಸಿದೆ?
A. ಶುದ್ದ ಕಬ್ಬಿಣ
B. ಶುದ್ದ ತಾಮ್ರ
C. ಚೊಕ್ಕಬೆಳ್ಳಿ
D. ಚೊಕ್ಕಬಂಗಾರ
9. ಈ ವಾಕ್ಯವನ್ನು ಪೂರ್ತಿಗೊಳಿಸಿರಿ: “ಮತಿವಂತರ ಮಾತೇ___________”
A. ಕದ್ದು
B. ಸದ್ದು
C. ಮುದ್ದು
D. ಮದ್ದು
10. ಕೀರ್ತನೆ 140 ರಲ್ಲಿ ದುಷ್ಟರ ನಾಲಿಗೆಯನ್ನು ಯಾವದಕ್ಕೆ ಹೋಲಿಸಿದ್ದಾರೆ?
A. ಸರ್ಪಕ್ಕೆ
B. ನಾಯಿಗೆ
C. ಪಾರಿವಾಳಕ್ಕೆ
D. ಹದ್ದಿಗೆ
Result: