Bible Quiz in Kannada Topic wise: 83 || ಕನ್ನಡ ಬೈಬಲ್ ಕ್ವಿಜ್ (ರೋಮಾಪುರದವರಿಗೆ ಬರೆದ ಪತ್ರಿಕೆ)

1. ರೋಮಾಪುರದವರಿಗೆ ಬರೆದ ಪತ್ರಿಕೆಯನ್ನು ಬರೆದವರು ಯಾರು?
A. ಲೂಕನು ಬರೆದನು
B. ಪೌಲನು ಬರೆದನು
C. ಸೀಲನು ಬರೆದನು
D. ಮತ್ತೀಯನು ಬರೆದನು
2. ಸಾರಿದ ಸುವಾರ್ತೆಯು ಯಾವದಕ್ಕೆ ಆಧಾರ?
A. ನಿತ್ಯಜೀವಕ್ಕೆ ಆಧಾರ
B. ದೀಕ್ಷಾಸ್ನಾನಕ್ಕೆ ಆಧಾರ
C. ರಕ್ಷಣೆಗೆ ಆಧಾರ
D. ನಂಬಿಕೆಗೆ ಆಧಾರ
3. ನಾವು ಮುಯ್ಯಿಗೆ ಮುಯ್ಯಿ ತೀರಿಸದೇ ಶಿಕ್ಷಿಸುವದನ್ನು ಯಾರಿಗೆ ಬಿಡಬೇಕು?
A. ದೇವರಿಗೆ ಬಿಡಬೇಕು
B. ಸೈತಾನನಿಗೆ ಬಿಡಬೇಕು
C. ವೈರಿಗೆ ಬಿಡಬೇಕು
D. ಸ್ನೇಹಿತರಿಗೆ ಬಿಡಬೇಕು
4. ನಮ್ಮ ಕಡೆ ಯಾರಿದ್ದರೆ ನಮ್ಮನ್ನು ಎದುರಿಸುವವರು ಯಾರು ಇಲ್ಲ?
A. ಸೈತಾನನು ನಮ್ಮ ಕಡೆ ಇದ್ದರೆ
B. ದೇವದೂತರು ನಮ್ಮ ಕಡೆ ಇದ್ದರೆ
C. ದೇವರು ನಮ್ಮ ಕಡೆ ಇದ್ದರೆ
D. ಸ್ನೇಹಿತರು ನಮ್ಮ ಕಡೆ ಇದ್ದರೆ
5. ನಾವು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆ ಮಾಡಿ, ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಮಗೇನು ಸಿಕ್ಕುತ್ತದೆ?
A. ನಿತ್ಯಜೀವ ಸಿಕ್ಕುತ್ತದೆ
B. ಆಶೀರ್ವಾದ ಸಿಕ್ಕುತ್ತದೆ
C. ಮಹಿಮೆ ಸಿಕ್ಕುತ್ತದೆ
D. ರಕ್ಷಣೆ ಸಿಕ್ಕುತ್ತದೆ
6. ದೇವರ ಕನಿಕರವನ್ನು ನಮ್ಮ ನೆನಪಿಗೆ ತಂದುಕೊಂಡು ನಾವು ಆತನಿಗೆ ಯಾವ ಯಜ್ಞವನ್ನು ಸಮರ್ಪಿಸಬೇಕು?
A. ನಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ನಿರ್ಜೀವ ಯಜ್ಞವಾಗಿ ಅರ್ಪಿಸಬೇಕು
B. ನಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಬೇಕು
C. ನಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ಪಶ್ಚಾತ್ತಾಪದ ಯಜ್ಞವಾಗಿ ಅರ್ಪಿಸಬೇಕು
D. ನಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ಕುಗ್ಗಿದ ಯಜ್ಞವಾಗಿ ಅರ್ಪಿಸಬೇಕು
7. ನಮಗೆ ಉಂಟಾಗುವ ಉಪದ್ರವಗಳಲ್ಲಿ ನಾವು ಏಕೆ ಉಲ್ಲಾಸದಿಂದಿರಬೇಕು?
A. ಯಾಕಂದರೆ ಉಪದ್ರವದಿಂದ ಕೋಪ ಹುಟ್ಟುತ್ತದೆ
B. ಯಾಕಂದರೆ ಉಪದ್ರವದಿಂದ ಜ್ಞಾನ ಹುಟ್ಟುತ್ತದೆ
C. ಯಾಕಂದರೆ ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ
D. ಯಾಕಂದರೆ ಉಪದ್ರವದಿಂದ ನಂಬಿಕೆ ಹುಟ್ಟುತ್ತದೆ
8. ಕೆಟ್ಟತನವನ್ನು ಯಾವದರಿಂದ ಸೋಲಿಸಬೇಕು?
A. ವೈರತ್ಮದಿಂದ
B. ತಾಳ್ಮೆಯಿಂದ
C. ಕೆಟ್ಟತನದಿಂದ
D. ಒಳ್ಳೇತನದಿಂದ
9. ನಮ್ಮ ಮೇಲಿರುವ ಅಧಿಕಾರಿಗಳನ್ನು ಯಾರು ನೇಮಿಸುತ್ತಾರೆ?
A. ದೇವರು
B. ಸೈತಾನನು
C. ದೇವದೂತರು
D. ಸರ್ಕಾರದ ಅಧಿಕಾರಿಗಳು
10. ಕ್ರಿಸ್ತನು ನಮ್ಮನ್ನು ಸೇರಿಸಿಕೊಂಡಂತೆ ನಾವೂ ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡರೆ ಏನಾಗುತ್ತದೆ?
A. ನಾವು ದೇವರ ಬೆಳಕನ್ನು ಪ್ರಕಾಶ ಪಡಿಸುತ್ತೇವೆ
B. ನಾವು ದೇವರ ಮಹಿಮೆಯನ್ನು ಪ್ರಕಾಶ ಪಡಿಸುತ್ತೇವೆ
C. ನಾವು ದೇವರ ಕೃಪೆಯನ್ನು ಪ್ರಕಾಶ ಪಡಿಸುತ್ತೇವೆ
D. ನಾವು ದೇವರ ಪ್ರೀತಿಯನ್ನು ಪ್ರಕಾಶ ಪಡಿಸುತ್ತೇವೆ
Result: