1. ಪ್ರವಾದಿಯಾದ ಎಲೀಷನ ಸೇವಕನು ಯಾರು?
2. ಸಿರಿಯ ದೇಶದ ಸೇನಾಪತಿಯು ತನ್ನ ಮನೆಯಲ್ಲಿದ್ದ ಚಿಕ್ಕ ಬಾಲಕಿಯ (ಗುಲಾಮಳು) ಮಾತನ್ನು ಕೇಳಿ ತನ್ನ ಕುಷ್ಠರೋಗದಿಂದ ವಾಸಿಯಾದನು. ಆ ಸೇನಾಪತಿ ಯಾರು?
3. ಅಬ್ರಹಾಮನು ತನ್ನ ಮಗನಾದ ಇಸಾಕನಿಗಾಗಿ ಹೆಣ್ಣು ತರಲು ಯಾರನ್ನು ಕಳಿಸಿದನು?
4. ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎಂದು ತನ್ನ ತಂ ದೆಯನ್ನು ಕೇಳಿದ್ದು ಯಾರು?
5. ಯಜಮಾನನು ಮತ್ತು ದ್ರಾಕ್ಷೆಯ ತೋಟದ ಸಾಮ್ಯದಲ್ಲಿ ಆ ಯಜಮಾನನು ಹಣ್ಣುಗಳನ್ನು ತರಲು ಒಕ್ಕಲಿಗರ ಬಳಿಗೆ ಯಾರನ್ನು ಕಳಿಸಿದನು?
6. “ದಾಸನ ರೂಪವನ್ನು ಧರಿಸಿಕೊಂಡವನು” ಎಂದು ಪೌಲನು ಯಾರ ವಿಷಯವಾಗಿ ಬರೆದಿದ್ದಾನೆ?
7. ನೈಲ್ ನದಿಯಲ್ಲಿ ತೇಲಾಡುತ್ತಿದ್ದ ಮಗುವನ್ನು ತನ್ನ ಬಳಿಗೆ ತರಲು ರಾಜಕುಮಾರಿಯು ಯಾರನ್ನು ಕಳಿಸಿದಳು?
8. ತಲಾಂತುಗಳ ಸಾಮ್ಯದಲ್ಲಿ ಧಣಿಯು, “ಭಲಾ ನಂಬಿಗಸ್ತನಾದ ಒಳ್ಳೇ ಆಳು ನೀನು” ಎಂದು ಯಾರಿಗೆ ಹೇಳಿದನು?
9. ತನ್ನ ಆಳನ್ನು ಸ್ವಸ್ಥ ಪಡಿಸಬೇಕೆಂದು ಯಾವ ರೋಮನ್ ಅಧಿಕಾರಿಯು ಯೇಸುವನ್ನು ಕೇಳಿಕೊಂಡನು?
10. ಓಡಿಹೋದ ಗುಲಾಮನನ್ನು ಕ್ಷಮಿಸಿ ತಿರುಗಿ ತನ್ನ ಬಳಿಗೆ ಕರೆದುಕೊಂಡು ಕ್ರೈಸ್ತ ಸಹೋದರನಂತೆ ನೋಡಿಕೊಳ್ಳಬೇಕೆಂದು ಶ್ರೀ ಪೌಲನು ಯಾರಿಗೆ ಕಾಗದ ಬರೆದನು?
Result:
0 out of 10