Bible Quiz in Kannada Topic wise: 61 || ಕನ್ನಡ ಬೈಬಲ್ ಕ್ವಿಜ್ (ಬೈಬಲ್ಲಿನ ವಿಷಯವಾಗಿ ಕೆಲವು ಸತ್ಯಾಂಶಗಳು)

1. ಹಳೆಯ ಒಡಂಬಡಿಕೆ ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿತು?
A. ಇಬ್ರಿಯ ಭಾಷೆಯಲ್ಲಿ
B. ಗ್ರೀಕ್ ಭಾಷೆಯಲ್ಲಿ
C. ರೊಮ್ ಭಾಷೆಯಲ್ಲಿ
D. ಸ್ಪ್ಯಾನಿಷ್ ಭಾಷೆಯಲ್ಲಿ
2. ಹೊಸ ಒಡಂಬಡಿಕೆ ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿತು?
A. ರೋಮ್ ಭಾಷೆಯಲ್ಲಿ
B. ಸ್ಪ್ಯಾನಿಷ್ ಭಾಷೆಯಲ್ಲಿ
C. ಗ್ರೀಕ್ ಭಾಷೆಯಲ್ಲಿ
D. ಇಬ್ರಿಯ ಭಾಷೆಯಲ್ಲಿ
3. ಲತೀನ್ ಭಾಷೆಯಲ್ಲಿ ಭಾಷಾಂತರಿಸಿದ ಬೈಬಲ್ಲಿನ ಹೆಸರೇನು?
A. kjv ಬೈಬಲ್
B. ವಲ್ಗೇಟ್ ಬೈಬಲ್
C. NIV ಬೈಬಲ್
D. NKJV ಬೈಬಲ್
4. ಸೆಪ್ಟ್ಯು ಅಜಿಂಟ್ ಬೈಬಲ್ ಅಂದರೆ ಯಾವದು?
A. ಹಳೆಯ ಒಡಂಬಡಿಕೆಯನ್ನು ಇಬ್ರಿಯ ಭಾಷೆಯಿಂದ ಗ್ರೀಕ್ ಭಾಷೆಗೆ ಮಾಡಿರುವ ಭಾಷಾಂತರ
B. ಹಳೆಯ ಒಡಂಬಡಿಕೆಯನ್ನು ಗ್ರೀಕ್ ಭಾಷೆಯಿಂದ ಇಬ್ರಿಯ ಭಾಷೆಗೆ ಮಾಡಿರುವ ಭಾಷಾಂತರ
C. ಹಳೆಯ ಒಡಂಬಡಿಕೆಯನ್ನು ಸ್ಪ್ಯಾನಿಷ್ ಭಾಷೆಯಿಂದ ಇಬ್ರಿಯ ಭಾಷೆಗೆ ಮಾಡಿರುವ ಭಾಷಾಂತರ
D. ಹಳೆಯ ಒಡಂಬಡಿಕೆಯನ್ನು ಗ್ರೀಕ್ ಭಾಷೆಯಿಂದ ಸ್ಪ್ಯಾನಿಷ್ ಭಾಷೆಗೆ ಮಾಡಿರುವ ಭಾಷಾಂತರ
5. ಹಳೆಯ ಒಡಂಬಡಿಕೆಯನ್ನು ಸಾಮಾನ್ಯವಾಗಿ ಯಾವ ಭಾಗಗಳಲ್ಲಿ ವಿಂಗಡಿಸಿದ್ದಾರೆ?
A. ಸಾಧಾರಣವಾಗಿ 2 ಗುಂಪುಗಳು: ಪಂಚಗ್ರಂಥಗಳು, ಐತಿಹಾಸಿಕ ಪುಸ್ತಕಗಳು
B. ಸಾಧಾರಣವಾಗಿ 5 ಗುಂಪುಗಳು: ಪಂಚಗ್ರಂಥಗಳು, ಐತಿಹಾಸಿಕ ಪುಸ್ತಕಗಳು, ಕವಿತೆ ಹಾಗೂ ಸುಭಾಷಿತಗಳು ಮತ್ತು ಪ್ರವಾದಿಗಳು, ಪ್ರಕಟಣೆಗಳು
C. ಸಾಧಾರಣವಾಗಿ 4 ಗುಂಪುಗಳು: ಪಂಚಗ್ರಂಥಗಳು, ಐತಿಹಾಸಿಕ ಪುಸ್ತಕಗಳು, ಕವಿತೆ ಹಾಗೂ ಸುಭಾಷಿತಗಳು ಮತ್ತು ಪ್ರವಾದಿಗಳು
D. ಸಾಧಾರಣವಾಗಿ 3 ಗುಂಪುಗಳು: ಪಂಚಗ್ರಂಥಗಳು, ಐತಿಹಾಸಿಕ ಪುಸ್ತಕಗಳು, ಕವಿತೆ ಹಾಗೂ ಸುಭಾಷಿತಗಳು
6. ಹೊಸ ಒಡಂಬಡಿಕೆಯನ್ನು ಸಾಮಾನ್ಯವಾಗಿ ಯಾವ ಭಾಗಗಳಲ್ಲಿ ವಿಂಗಡಿಸಿದ್ದಾರೆ?
A. ಸಾಮಾನ್ಯವಾಗಿ 4 ಗುಂಪುಗಳು: ಸುವಾರ್ತೆಗಳು, ಇತಿಹಾಸ (ಅ.ಕ್ರ.) ಪತ್ರಿಕೆಗಳು (ಪೌಲನ ಮತ್ತು ಸಾಮಾನ್ಯ), ಪ್ರವಾದನೆ.
B. ಸಾಮಾನ್ಯವಾಗಿ 5 ಗುಂಪುಗಳು: ಸುವಾರ್ತೆಗಳು, ಇತಿಹಾಸ (ಅ.ಕ್ರ.) ಪತ್ರಿಕೆಗಳು (ಪೌಲನ ಮತ್ತು ಸಾಮಾನ್ಯ), ಪ್ರವಾದನೆ, ಕೀರ್ತನೆಗಳು
C. ಸಾಮಾನ್ಯವಾಗಿ 3 ಗುಂಪುಗಳು: ಸುವಾರ್ತೆಗಳು, ಇತಿಹಾಸ (ಅ.ಕ್ರ.) ಪತ್ರಿಕೆಗಳು (ಪೌಲನ ಮತ್ತು ಸಾಮಾನ್ಯ).
D. ಸಾಮಾನ್ಯವಾಗಿ 2 ಗುಂಪುಗಳು: ಸುವಾರ್ತೆಗಳು, ಇತಿಹಾಸ (ಅ.ಕ್ರ.)
7. ಸಮಾನದೃಷ್ಟಿಯ ಸುವಾರ್ತೆಗಳು (ಸಿನಾಪ್ಟಿಕ್ ಗಾಸ್ಪೆಲ್ಸ್) ಯಾವವು?
A. ಮತ್ತಾಯ, ಯೋಹಾನ, ಅಪೋಸ್ತಲ ಕೃತ್ಯ
B. ಮತ್ತಾಯ, ಮಾರ್ಕ, ಲೂಕ
C. ಮತ್ತಾಯ, ಮಾರ್ಕ, ರೋಮಾಪುರ
D. ಮತ್ತಾಯ, ಲೂಕ, ಯೋಹಾನ
8. ಅವುಗಳನ್ನು ಸಮಾನದೃಷ್ಟಿಯ ಸುವಾರ್ತೆಗಳೆಂದು ಯಾಕೆ ಕರೆಯುತ್ತಾರೆ?
A. ಇವೆಲ್ಲವುಗಳಲ್ಲಿ ಯೇಸುವಿನ ಜೀವನ ಚರಿತ್ರೆಯಿದೆ ಮತ್ತು ಇವುಗಳಲ್ಲಿ ಅನೇಕ ವಚನಗಳು ಬೇರೆ ರೀತಿಯಾಗಿವೆ.
B. ಇವೆಲ್ಲವುಗಳಲ್ಲಿ ಯೇಸುವಿನ ಜೀವನ ಚರಿತ್ರೆಯಿದೆ ಮತ್ತು ಇವುಗಳಲ್ಲಿ ಅನೇಕ ವಚನಗಳು ಒಂದೇ ರೀತಿಯಾಗಿವೆ.
C. ಇವೆಲ್ಲವುಗಳಲ್ಲಿ ಯೇಸುವಿನ ಜೀವನ ಚರಿತ್ರೆಯಿಲ್ಲ ಮತ್ತು ಇವುಗಳಲ್ಲಿ ಅನೇಕ ವಚನಗಳು ಬೇರೆ ರೀತಿಯಾಗಿವೆ.
D. ಇವೆಲ್ಲವುಗಳಲ್ಲಿ ಯೋಹಾನನ ಜೀವನ ಚರಿತ್ರೆಯಿದೆ ಮತ್ತು ಇವುಗಳಲ್ಲಿ ಅನೇಕ ವಚನಗಳು ಒಂದೇ ರೀತಿಯಾಗಿವೆ.
9. “ಸುವಾರ್ತೆ” ಎನ್ನುವ ಶಬ್ದದ ಅರ್ಥವೇನು?
A. ಧರ್ಮಶಾಸ್ತ್ರ
B. ಅಶುಭ ಸಂದೇಶ
C. ಶುಭ ಸಂದೇಶ
D. ಆಶೀರ್ವಾದದ ಸಂದೇಶ
10. ಹಳೆಯ ಒಡಂಬಡಿಕೆ ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿತು?
A. ಇಬ್ರಿಯ ಭಾಷೆಯಲ್ಲಿ
B. ಗ್ರೀಕ್ ಭಾಷೆಯಲ್ಲಿ
C. ರೊಮ್ ಭಾಷೆಯಲ್ಲಿ
D. ಸ್ಪ್ಯಾನಿಷ್ ಭಾಷೆಯಲ್ಲಿ
11. ಪೆಂಟಟ್ಯೂಕ್ ಅಂದರೆ ಏನು? ಇದರಲ್ಲಿ ಬೈಬಲ್ಲಿನ ಯಾವ ಯಾವ ಪುಸ್ತಕಗಳು ಒಳಗೊಂಡಿವೆ?
A. ಹಳೆಯ ಒಡಂಬಡಿಕೆಯ ಮೊದಲಿನ ಎರಡು ಪುಸ್ತಕಗಳು: ಆದಿಕಾಂಡ, ವಿಮೋಚನಾಕಾಂಡ
B. ಹಳೆಯ ಒಡಂಬಡಿಕೆಯ ಮೊದಲಿನ ಮೂರು ಪುಸ್ತಕಗಳು: ಆದಿಕಾಂಡ, ವಿಮೋಚನಾಕಾಂಡ, ಯಾಜಕಕಾಂಡ
C. ಹಳೆಯ ಒಡಂಬಡಿಕೆಯ ಮೊದಲಿನ ನಾಲ್ಕು ಪುಸ್ತಕಗಳು: ಆದಿಕಾಂಡ, ವಿಮೋಚನಾಕಾಂಡ, ಯಾಜಕಕಾಂಡ, ಅರಣ್ಯಕಾಂಡ.
D. ಹಳೆಯ ಒಡಂಬಡಿಕೆಯ ಮೊದಲಿನ ಐದು ಪುಸ್ತಕಗಳು: ಆದಿಕಾಂಡ, ವಿಮೋಚನಾಕಾಂಡ, ಯಾಜಕಕಾಂಡ, ಅರಣ್ಯಕಾಂಡ, ಧರ್ಮೋಪದೇಶಕಾಂಡ.
12. ಹೊಸ ಒಡಂಬಡಿಕೆ ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿತು?
A. ರೋಮ್ ಭಾಷೆಯಲ್ಲಿ
B. ಸ್ಪ್ಯಾನಿಷ್ ಭಾಷೆಯಲ್ಲಿ
C. ಗ್ರೀಕ್ ಭಾಷೆಯಲ್ಲಿ
D. ಇಬ್ರಿಯ ಭಾಷೆಯಲ್ಲಿ
13. ಬೈಬಲ್ಲಿನಲ್ಲಿರುವ ಸುಭಾಷಿತಗಳು ಅಥವಾ ಜ್ಞಾನಸೂಕ್ತಿಯ ಗೃಂಥಗಳು ಯಾವುವು?
A. ಜ್ಞಾನೋಕ್ತಿಗಳು, ಪ್ರಸಂಗಿ
B. ಕೀರ್ತನೆಗಳು, ಪ್ರಸಂಗಿ
C. ಜ್ಞಾನೋಕ್ತಿಗಳು, ಪರಮಗೀತೆ
D. ಪರಮಗೀತೆ, ಪ್ರಸಂಗಿ
14. ಪೌಲನು ಬರೆದ ಸಭಾಪಾಲನಾ ಪತ್ರಿಕೆಗಳು ಯಾವವು?
A. ಅಪೋಸ್ತಲ ಕೃತ್ಯ, ರೋಮಾಪುರ
B. 1,2 ತಿಮೋಥೆ ಮತ್ತು ತೀತನು
C. 1, 2 ಪೇತ್ರ ಮತ್ತು ಯಾಕೋಬ
D. ಇಬ್ರಿಯ ಮತ್ತು ಯೂದ
15. ಪೌಲನು ತನ್ನ ಯಾವ ಪತ್ರಿಕೆಗಳಲ್ಲಿ ಕ್ರಿಸ್ತನ ಪುನರಾಗಮನವನ್ನು ಕುರಿತು ಬರೆದಿದ್ದಾನೆ?
A. 1, 2 ಪೇತ್ರ
B. 1, 2, 3 ಯೋಹಾನ
C. 1, 2 ತಿಮೋಥಿಯವರಿಗೆ
D. 1, 2 ಥೆಸಲೋನಿಕದವರಿಗೆ
16. ಬೈಬಲ್ಲಿನಲ್ಲಿ ಎಷ್ಟು ಅಧ್ಯಾಯಗಳಿವೆ?
A. 1,199 ಅಧ್ಯಾಯಗಳು
B. 1,189 ಅಧ್ಯಾಯಗಳು
C. 1,169 ಅಧ್ಯಾಯಗಳು
D. 1,170 ಅಧ್ಯಾಯಗಳ
17. ಬೈಬಲ್ಲಿನಲ್ಲಿ ಎಷ್ಟು ವಚನಗಳಿವೆ?
A. 31, 101 ವಚನಗಳು
B. 32, 101 ವಚನಗಳು
C. 31, 200 ವಚನಗಳು
D. 31, 109 ವಚನಗಳು
18. ಬೈಬಲ್ಲಿನಲ್ಲಿ ಎಷ್ಟು ವಾಗ್ದಾನಗಳಿವೆ?
A. 1, 160 ವಾಗ್ಧಾನಗಳು
B. 1, 260 ವಾಗ್ಧಾನಗಳು
C. 1, 360 ವಾಗ್ಧಾನಗಳು
D. 1, 460 ವಾಗ್ಧಾನಗಳು
19. ಬೈಬಲ್ಲಿನಲ್ಲಿ ಎಷ್ಟು ಪ್ರಶ್ನೆಗಳಿವೆ?
A. 3, 394 ಪ್ರಶ್ನೆಗಳು
B. 3, 294 ಪ್ರಶ್ನೆಗಳು
C. 1, 294 ಪ್ರಶ್ನೆಗಳು
D. 3, 794 ಪ್ರಶ್ನೆಗಳು
20. ಬೈಬಲ್ಲಿನಲ್ಲಿ ಅತಿ ಚಿಕ್ಕ ಅಧ್ಯಾಯ ಯಾವದು?
A. ಕೀರ್ತನೆ 117
B. ಕೀರ್ತನೆ 119
C. ಕೀರ್ತನೆ 122
D. ಕೀರ್ತನೆ 150
Result: