Bible Quiz in Kannada Topic wise: 88 || ಕನ್ನಡ ಬೈಬಲ್ ಕ್ವಿಜ್ (ಶೋಧನೆಗಳು)

1. ಶೋಧನೆಗಳನ್ನು ತರುವವರು ಯಾರು?
A. ಮನಸ್ಸು
B. ಯೇಸು
C. ಸೈತಾನನು
D. ನಮ್ಮ ಇಚ್ಛೆಗಳು
2. ಹವ್ವಳನ್ನು ಮೋಸ ಪಡಿಸಿದವರು ಯಾರು?
A. ಆದಾಮನು
B. ಸೈತಾನನು
C. ದೇವರು
D. ಸ್ವಯಿಚ್ಛೆ
3. ಶೋಧನೆಗಳನ್ನೆದುರಿಸುವವರಿಗೆ ದೇವರು ಯಾವ ರೀತಿಯಲ್ಲಿ ಸಹಾಯ ಮಾಡುತ್ತಾನೆ?
A. ಶೋಧನೆಯನ್ನೆದುರಿಸುವದಕ್ಕೆ ಶಕ್ತರಾಗುವಂತೆ ಮತ್ತು ಅದರಿಂದ ಓಡಿಹೋಗುವ ಮಾರ್ಗವನ್ನು ದೇವರು ಸಿದ್ಧ ಮಾಡುವನು
B. ಶೋಧನೆಯನ್ನೆದುರಿಸುವದಕ್ಕೆ ಶಕ್ತರಾಗುವಂತೆ ಮತ್ತು ಅದರಿಂದ ಸೋಲುವಂತೆ ಮಾರ್ಗವನ್ನು ದೇವರು ಸಿದ್ಧ ಮಾಡುವನು
C. ಶೋಧನೆಯನ್ನೆದುರಿಸುವದಕ್ಕೆ ಶಕ್ತರಾಗುವಂತೆ ಮತ್ತು ಅದನ್ನು ತಪ್ಪಿಸಿಕೊಳ್ಳುವ ಮಾರ್ಗವನ್ನು ದೇವರು ಸಿದ್ಧ ಮಾಡುವನು
D. ಶೋಧನೆಯನ್ನೆದುರಿಸುವದಕ್ಕೆ ಶಕ್ತರಾಗುವಂತೆ ಮತ್ತು ಅದನ್ನು ಬಿಟ್ಟುಕೊಡುವದಕ್ಕೆ ಮಾರ್ಗವನ್ನು ದೇವರು ಸಿದ್ಧ ಮಾಡುವನು
4. ಅಡವಿಯಲ್ಲಿ ಸೈತಾನನು ಯೇಸುವನ್ನು ಎಷ್ಟು ಕಾಲ ಶೋಧಿಸಿದನು?
A. 50 ದಿನಗಳು
B. 30 ದಿನಗಳು
C. 40 ದಿನಗಳು
D. 60 ದಿನಗಳು
5. ನಮ್ಮ ಹಾಗೆ ಶೋಧನೆಗೆ ಗುರಿಯಾದರೂ ಪಾಪ ಮಾಡದೆ ಹೋದ ವ್ಯಕ್ತಿ ಯಾರು?
A. ಪೌಲನು
B. ಯೇಸು ಕ್ರಿಸ್ತನು
C. ಸ್ತೆಫನನು
D. ಯೋಸೇಫನು
6. ಯೇಸು 40 ದಿವಸ ಉಪವಾಸ ಮಾಡಿದ ಮೇಲೆ ಯೇಸು ಎಷ್ಟು ಶೋಧನೆಗಳನ್ನೆದುರಿಸಿದನು?
A. ಮೂರು
B. ನಾಲ್ಕು
C. ಆರು
D. ಎರಡು
7. ಬೈಬಲ್ಲಿನಲ್ಲಿ ಶೋಧಿಸಲ್ಪಟ್ಟರು ಪಾಪಕ್ಕೊಳಗಾಗದ ಕೆಲವು ವ್ಯಕ್ತಿಗಳ ಉದಾಹರಣೆಯನ್ನು ಕೊಡಿರಿ
A. ಸಹಾಯ ಮಾಡಿದ್ದಕ್ಕಾಗಿ ಅಬ್ರಹಾಮನು ಪ್ರತಿಫಲ ತಕ್ಕೊಳ್ಳಲಿಲ್ಲ (ಆದಿ.14:23)
B. ಎಲೀಷನು ಗುಣಪಡಿಸಿದ್ದಕ್ಕಾಗಿ ದುಡ್ಡು ತಕ್ಕೊಳ್ಳಲಿಲ್ಲ (2 ಅರಸು 5:16)
C.ಲೌಕಿಕ ಸಂಪತ್ತು ಕೀರ್ತಿಗಳಿಗಾಗಿ ಯೇಸು ಶೋದನೆಗೊಳಗಾಗಲಿಲ್ಲ (ಲೂಕ 4:5-8)
D.ಪೇತ್ರನು ಲಂಚ ತಕ್ಕೊಳ್ಳಲಿಲ್ಲ (ಅ.ಕೃ.8:20)
8. ದಾವೀದನು ಎಂಥಾ ಶೋಧನೆಗೆ ಗುರಿಯಾದನು?
A. ಕಳ್ಳತನ
B. ಆಕ್ರಮಣ
C. ವ್ಯಭಿಚಾರ
D. ಕೊಲ್ಲುವುದು
9. ಪಾಪಕ್ಕೆ ಕೆಲವು ಮೂಲ ಕಾರಣಗಳು ಯಾವವು?
A. ತ್ಯಾಗ ಹಾಗೂ ಸೇವೆಯ ಲಾಭದ ಅಪೇಕ್ಷೆ
B. ವಿಗ್ರಹಾರಾಧನೆ ಹಾಗೂ ಮತ್ಸರ
C. ದುಂದೌತಣ ಹಾಗೂ ಲೋಭ
D. ಕೆಟ್ಟ ಸಹವಾಸ ಹಾಗೂ ದುರಾಶೆ
10. ಪಾಪ ಮಾಡಲು ಗಂಡಸರನ್ನು ಪ್ರೇರೇಪಿಸಿದ ಕೆಲವು ಸ್ತ್ರೀಯರ (ಬೈಬಲ್ಲಿನಿಂದ) ಹೆಸರುಗಳನ್ನು ಹೇಳಿರಿ.
A. ಹಗರಳು, ಪೆನ್ನಿನಳು, ಮಿರ್ಯಾಮಳು, ತಾಮಾರಳು
B. ಹವ್ವಳು, ಯೋಬನ ಹೆಂಡತಿ, ದೇಲಿಲಳು, ಈಜೆಬೆಲಳು
C. ಹವ್ವಳು, ರೂತಳು, ನವೋಮಿ, ಹೆರೋದ್ಯಳು
D. ಲೇಯಳು, ರಾಹೇಳಲು, ದೆಬೋರಳು, ಹನ್ನಳು
Result: