Bible Quiz in Kannada Topic wise: 82 || ಕನ್ನಡ ಬೈಬಲ್ ಕ್ವಿಜ್ (ರೂತಳು)

1. ಎಲೀಮೆಲೇಕನು ತನ್ನ ಕುಟುಂಬದೊಂದಿಗೆ ಬೆತ್ಲೆಹೇಮನ್ನು ಬಿಟ್ಟು ಮೋವಾಬ ದೇಶಕ್ಕೆ ಏಕೆ ಹೋದನು?
A. ಜಲಪ್ರಳಯ ಬಂದದ್ದರಿಂದ
B. ಮಾರಣಾಂತಿಕ ರೋಗ ಬಂದದ್ದರಿಂದ
C. ಬರಗಾಲ ಬಂದದ್ದರಿಂದ
D. ದರಿದ್ರರಾಗಿದ್ದರಿಂದ
2. ಎಲೀಮೆಲೇಕನ ಇಬ್ಬರು ಗಂಡು ಮಕ್ಕಳ ಹೆಸರೇನು?
A. ಮಹ್ಲೋನ್ ಮತ್ತು ಗಯ್ಜೊನ್
B. ಮಹ್ಲೋನ್ ಮತ್ತು ಸಿಲ್ಲೋನ್
C. ಯೊರ್ಫಾನ್ ಮತ್ತು ಕಿಲ್ಯೋನ್
D. ಮಹ್ಲೋನ್ ಮತ್ತು ಕಿಲ್ಯೋನ್
3. ಮೋವಾಬ ದೇಶದಲ್ಲಿ ಎಲೀಮೆಲೇಕನಿಗೆ ಏನು ಸಂಭವಿಸಿತು?
A. ಎಲೀಮಲೇಕನು ಓಡಿ ಹೋದನು
B. ಎಲೀಮಲೇಕನು ಬೆದರಿದನು
C. ಎಲೀಮಲೇಕನು ಸತ್ತನು
D. ಎಲೀಮಲೇಕನು ದರಿದ್ರನಾದನು
4. ನೊವೋಮಿ ಮತ್ತು ರೂತಳ ನಡುವೆ ಯಾವ ಸಂಬಂಧವಿತ್ತು?
A. ಅತ್ತೆ-ಸೊಸೆಯರ ಸಂಬಂಧ
B. ತಾಯಿ-ಮಗಳ ಸಂಬಂಧ
C. ಅಕ್ಕ-ತಂಗಿಯ ಸಂಬಂಧ
D. ಅಜ್ಜಿ-ಮೊಮ್ಮೊಗಳ ಸಂಬಂಧ
5. “ನಿನ್ನ ದೇವರೇ ನನ್ನ ದೇವರು” ಎಂದು ಯಾರು ಹೇಳಿದರು?
A. ನವೋಮಿಯಳು
B. ರೂತಳು
C. ಹಗರಳು
D. ಲೇಯಳು
6. ಬೋವಜನು ಯಾರು?
A. ನೋವೋಮಿಯ ಗಂಡ ಎಲೀಮೆಲೇಕನ ಗೋತ್ರದವನಾದ ಧನವಂತನಾದ ಸಂಬಂಧಿಯು
B. ನೋವೋಮಿಯ ಗಂಡ ಎಲೀಮೆಲೇಕನ ಗೋತ್ರದವನಾದ ಬಡ ಸಂಬಂಧಿಯು
C. ನೋವೋಮಿಯ ಗಂಡ ಎಲೀಮೆಲೇಕನ ಗೋತ್ರದವನಾದ ಸನ್ನಿಹ ಸಂಬಂಧಿಯು
D. ನೋವೋಮಿಯ ಗಂಡ ಎಲೀಮೆಲೇಕನ ಗೋತ್ರದವನಾದ ದೂರ ಸಂಬಂಧಿಯು
7. ತನ್ನ ಹೊಲದಲ್ಲಿ ಹಕ್ಕಲಾಯಲು ಬೋವಜನು ರೂತಳಿಗೆ ಏಕೆ ಅಪ್ಪಣೆ ಕೊಟ್ಟನು?
A. ಅತ್ತೆಯನ್ನು ಪ್ರೀತಿಸಿ, ಸ್ವದೇಶವನ್ನು ಬಿಟ್ಟು ಬಂದದ್ದರಿಂದ
B. ಅತ್ತೆಯನ್ನು ಪ್ರೀತಿಸಿ, ಗಂಡನನ್ನು ಬಿಟ್ಟು ಬಂದದ್ದರಿಂದ
C. ಅತ್ತೆಯನ್ನು ಪ್ರೀತಿಸಿ, ಸ್ವಂತ ಮನೆಯನ್ನು ಬಿಟ್ಟು ಬಂದದ್ದರಿಂದ
D. ಅತ್ತೆಯನ್ನು ಪ್ರೀತಿಸಿ, ಪರದೇಶಿಯನ್ನು ಬಿಟ್ಟು ಬಂದದ್ದರಿಂದ
8. ರೂತಳು ಯಾವ ಧಾನ್ಯಗಳ ಸುಗ್ಗಿಯಲ್ಲಿ ಹಕ್ಕಲಾಯ್ದಳು?
A. ರವೆ ಮತ್ತು ಜವೆಗೋದಿಯ ಸುಗ್ಗಿ
B. ರಾಗಿ ಮತ್ತು ಜವೆಗೋದಿಯ ಸುಗ್ಗಿ
C. ಭತ್ತ ಮತ್ತು ಜವೆಗೋದಿಯ ಸುಗ್ಗಿ
D. ಗೋದಿ ಮತ್ತು ಜವೆಗೋದಿಯ ಸುಗ್ಗಿ
9. ಬೋವಜನು ಮತ್ತು ರೂತಳ ಮಗನ ಹೆಸರೇನು?
A. ಜೆಕರ್ಯನು
B. ಯೇಶಾಯನು
C. ಓಬೇದನು
D. ಹೋಶೇಯ
10. ರೂತಳ ಮರಿಮಗನು ಮತ್ತು ಓಬೇದನ ಮೊಮ್ಮಗನ ಹೆಸರೇನು?
A. ಸೊಲೊಮೋನನು
B. ಸಂಸೋನನು
C. ದಾವೀದನು
D. ಸಾಮುವೇಲನು
Result: