Bible Quiz in Kannada Topic wise: 79 || ಕನ್ನಡ ಬೈಬಲ್ ಕ್ವಿಜ್ (ಯೋಹಾನನ ಸುವಾರ್ತೆ)

1. ಯೇಸು ಸತ್ತವರೊಳಗಿಂದ ಎಬ್ಬಿಸಿದ್ದ ಲಾಜರನು ಎಷ್ಟು ದಿನ ಸಮಾಧಿಯಲ್ಲಿದ್ದನು?
A. ಎರಡು ದಿವಸಗಳು
B. ನಾಲ್ಕು ದಿವಸಗಳು
C. ಎಂಟು ದಿವಸಗಳು
D. ಆರು ದಿವಸಗಳು
2. ಯೋಹಾನ 9ನೇ ಅಧ್ಯಾಯದಲ್ಲಿ ದೌರ್ಬಲ್ಯದಿಂದ ಇದ್ದ ಒಬ್ಬ ಮನುಷ್ಯನನ್ನು ಯೇಸು ಗುಣಪಡಿಸಿದನು ಆ ದೌರ್ಬಲ್ಯ ಏನಾಗಿತ್ತು?
A. ಹುಟ್ಟು ಕಿವುಡನು
B. ಹುಟ್ಟು ಮೂಕನು
C. ಹುಟ್ಟು ಕುರುಡನು
D. ಹುಟ್ಟು ಕುಂಟನು
3. ಯೇಸು 5000 ಜನರಿಗೆ ಅದ್ಭುತವಾಗಿ ಊಟ ಕೊಟ್ಟನು, ನಂತರ ಇನ್ನೊಂದು ಅದ್ಭುತ ಕಾರ್ಯವನ್ನು ಮಾಡಿದನು ಅದು ಏನು?
A. ಯೇಸು ಸಮುದ್ರದ ಮೇಲೆ ನಡೆದನು
B. ಯೇಸು ಗಾಳಿಯಳ್ಳಿ ತೂರಾಡಿದನು
C. ಯೇಸು ದೊಡ್ಡ ಬೆಟ್ಟಗಳ ಮೇಲೆ ನಡೆದನು
D. ಯೇಸು ಮೋಡಗಳ ಮೇಲೆ ನಡೆದನು
4. ಯೇಸು 5000 ಜನರಿಗೆ 2 ಮೀನು 5 ರೊಟ್ಟಿಗಳನ್ನು ಊಟಕ್ಕೆ ಕೊಟ್ಟನು ಊಟವಾದ ಮೇಲೆ ಎಷ್ಟು ಬುಟ್ಟಿ ಊಟವನ್ನು ಕೂಡಿಸಿಟ್ಟರು?
A. ಹದಿನೈದು ಬುಟ್ಟಿಗಳು
B. ಹದಿನಾರು ಬುಟ್ಟಿಗಳು
C. ಹದಿನಾಲ್ಕು ಬುಟ್ಟಿಗಳು
D. ಹನ್ನೆರಡು ಬುಟ್ಟಿಗಳು
5. ಯೇಸು ಮಾಡಿದ ಅದ್ಬುತ ಕಾರ್ಯಗಳಿಗೆ ಯೋಹಾನನು ಕೊಟ್ಟ ಮತ್ತೊಂದು ಹೆಸರು ಏನು?
A. ದೈವಿಕ ಕಾರ್ಯ
B. ಅಲೌಕಿಕ ಕಾರ್ಯ
C. ಮಹತ್ಕಾರ್ಯ
D. ಸೂಚಕ ಕಾರ್ಯ
6. ಯೋಹಾನನ ಸುವಾರ್ತೆಯಲ್ಲಿ ಬಹು ಮುಖ್ಯವಾದ ವಚನ ಯಾವುದು?
A. ಯೋಹಾನ 7:16
B. ಯೋಹಾನ 8:16
C. ಯೋಹಾನ 2:16
D. ಯೋಹಾನ 3:16
7. ಯೋಹಾನನ ಸುವಾರ್ತೆಯನ್ನು ಮತ್ತೊಂದು ಹೆಸರಿನಿಂದ ಕರೆಯುತ್ತಾರೆ ಅದು ಏನು?
A. ಮೊದಲನೆಯ ಸುವಾರ್ತೆ
B. ಎರಡನೆಯ ಸುವಾರ್ತೆ
C. ನಾಲ್ಕನೆಯ ಸುವಾರ್ತೆ
D. ಹತ್ತೆನೆಯ ಸುವಾರ್ತೆ
8. ಯೇಸು ಪುನರುತ್ಥಾನವಾದಾಗ ಯೋಹಾನನ ಸುವಾರ್ತೆಯಲ್ಲಿ ಯಾರಿಗೆ ಮೊದಲು ಕಾಣಿಸಿಕೊಂಡನು?
A. ಮಾರ್ಥಳು
B. ಯೇಸುವಿನ ತಾಯಿಯಾದ ಮರಿಯಳು
C. ಮಗ್ದಲದ ಮರಿಯಳು
D. ಸಮಾರ್ಯದ ಸ್ರ್ತೀ
9. “ನನ್ನ ಮೇಲೆ ಪ್ರೀತಿ ಇಟ್ಟಿದ್ದಿಯೋ?” ಎಂಬ ಪ್ರಶ್ನೆಯನ್ನು ಯೇಸು ಯಾವ ಶಿಷ್ಯನಿಗೆ ಕೇಳಿದನು?
A. ಪೇತ್ರನನ್ನು ಕೇಳಿದನು
B. ಫಿಲೊಮೋನನನ್ನು ಕೇಳಿದನು
C. ಯೋಹಾನನನ್ನು ಕೇಳಿದನು
D. ಮಾರ್ಕನನ್ನು ಕೇಳಿದನು
10. ಯೋಹಾನನ ಸುವಾರ್ತೆ 17 ಅಧ್ಯಾಯದಲ್ಲಿ ಯೇಸು ಮಾಡಿದ ಪ್ರಾರ್ಥನೆಗೆ ಯಾವ ಹೆಸರನ್ನು ಕೊಡಲಾಗಿದೆ?
A. ಪರಹಿತ ಪ್ರಾರ್ಥನೆ-ಯೇಸು ತನ್ನ ಶಿಷ್ಯರಿಗಾಗಿ ಮತ್ತು ಸೇವಕರಿಗಾಗಿ ಪ್ರಾರ್ಥಿಸಿದನು
B. ಪರಹಿತ ಪ್ರಾರ್ಥನೆ-ಯೇಸು ತನ್ನ ಶಿಷ್ಯರಿಗಾಗಿ ಮತ್ತು ಭಕ್ತರಿಗಾಗಿ ಪ್ರಾರ್ಥಿಸಿದನು
C. ಪರಹಿತ ಪ್ರಾರ್ಥನೆ-ಯೇಸು ತನ್ನ ಮಕ್ಕಳಿಗಾಗಿ ಮತ್ತು ಭಕ್ತರಿಗಾಗಿ ಪ್ರಾರ್ಥಿಸಿದನು
D. ಪರಹಿತ ಪ್ರಾರ್ಥನೆ-ಯೇಸು ತನ್ನ ದೂತರಿಗಾಗಿ ಮತ್ತು ಭಕ್ತರಿಗಾಗಿ ಪ್ರಾರ್ಥಿಸಿದನು
Result: