Bible Quiz in Kannada Topic wise: 80 || ಕನ್ನಡ ಬೈಬಲ್ ಕ್ವಿಜ್ (ರಾಜ, ರಾಣಿ ಮತ್ತು ರಾಜ್ಯಗಳು)

1. ಇಸ್ರಾಯೇಲ್ಯರ ಮೊದಲನೆಯ ರಾಜನ ಹೆಸರೇನು?
A. ಸೌಲನು
B. ಸೋಲೋಮೋನನು
C. ದಾವೀದನು
D. ಅಹಾಬನು
2. ಯಾವ ರಾಜನ ಅನೇಕ ಕೀರ್ತನೆಗಳನ್ನು ಬರೆದಿದ್ದಾನೆ
A. ದಾನಿಯೇಲನು
B. ದಾವೀದನು
C. ಫರೋಹನು
D. ಹೆರೋದನು
3. ಯೆರೂಸಲೇಮಿನಲ್ಲಿ ಮೊದಲನೆಯ ದೇವಾಲಯವನ್ನು ಕಟ್ಟಿಸಿದವರು ಯಾರು?
A. ದಾವೀದನು
B. ದಾನಿಯೇಲನು
C. ಸೊಲೋಮೋನನು
D. ನೆಹೇಮಿಯನು
4. ಯಾವ ರಾಜನು ಹುಚ್ಚನಾಗಿ ಹುಲ್ಲು ತಿಂದನು?
A. ನೂನನು
B. ನೆಹೇಮಿಯನು
C. ನೆಬುಕ್ದನೇಚ್ಚರನು
D. ನಾತಾನಯೇಲನು
5. ಯಾವ ರಾಜನು ದಾನಿಯೇಲನನ್ನು ಸಿಂಹಗಳ ಗವಿಯಲ್ಲಿ ಹಾಕಿಸಿದನು?
A. ದಾವೀದನು
B. ದಾರ್ಯಾವೇಷನು
C. ನೆಬುಕ್ದನೇಚ್ಚರನು
D. ಕೋರೇಷನು
6. ಒಬ್ಬ ರಾಜನು ಏಂದೋರಿನಲ್ಲಿದ್ದ ಸತ್ತವರಲ್ಲಿ ವಿಚಾರಿಸಬಲ್ಲ ಒಬ್ಬ ಸ್ತ್ರೀಯನ್ನು ಹುಡುಕಿಕೊಂಡು ಹೋದನು. ಆ ರಾಜನು ಯಾರು?
A. ಸೌಲನು
B. ಸಿಂಸೋನನು
C. ಸಾಮುವೇಲನು
D. ನಾಮಾನನು
7. ಇಸ್ರಾಯೇಲ್ಯರಲ್ಲಿ ಅತಿ ಜ್ಞಾನಿಯಾದ ರಾಜನು ಯಾರು?
A. ಸೌಲನು
B. ಸೀಮೋನನು
C. ಸಿಂಸೋನನು
D. ಸೊಲೊಮೋನನು
8. ಯಾವ ರಾಜನು ಗೋಡೆಯ ಮೇಲೆ ಬರವಣಿಗೆಯನ್ನು ನೋಡಿದನು?
A. ದಾವೀದನು
B. ದರ್ಯಾವೇಷನು
C. ಬೆಲ್ಶಚ್ಚರನು
D. ಬಿಳಾಮನು
9. “ಕುರುಬನಾಗಿದ್ದ ರಾಜನು” ಎಂಬ ಹೆಸರು ಯಾರದು?
A. ಇಷಯನು
B. ಓಬೇದನು
C. ಸೌಲನು
D. ದಾವೀದನು
10. ನಾಬೋತನ ದ್ರಾಕ್ಷಾತೋಟವನ್ನು ಬಯಸಿದ ರಾಜನಾರು?
A. ಅಹಾಬನು
B. ಅಮ್ರಾಮನು
C. ಅಬ್ರಹಾಮನು
D. ಅನನೀಯನು
11. ಐಗುಪ್ತ ದೇಶದ ರಾಜನಿಗೆ ಯಾವ ಬಿರುದು ಇತ್ತು?
A. ಫಿಲೋಮೋನನು
B. ಫರೋಹನು
C. ಫಿಲಾತನು
D. ಫಿಲಿಪ್ಪನು
12. ಇಸ್ರಾಯೇಲ್ಯರನ್ನು ಶಪಿಸಬೇಕೆಂದು ಒಬ್ಬ ಪ್ರವಾದಿಯನ್ನು ಕರೆದ ರಾಜನಾರು?
A. ಬಾಳಾಸಾಹೇಬನು
B. ಬಾಳಾಮನು
C. ಬಾಲಾಕನು
D. ಬರ್ನಾಬನು
13. ರಾಣಿಯಾದ ಎಸ್ತೇರಳ ಗಂಡನ ಹೆಸರೇನು?
A. ಅಹಾಬನು
B. ಅಹಷ್ವೆರೋಷನು
C. ಅಮ್ರಾಮನು
D. ಆಸ್ಸಾಯನು
14. ಜ್ಞಾನಿಯಾದ ರಾಜನನ್ನು ಕಾಣಲು ದೂರದಿಂದ ಬಂದ ರಾಣಿಯ ಹೆಸರೇನು?
A. ಎಬ್ಶೀಬಾ
B. ಶೀಬಾ
C. ಶೇಬದರಾಣಿ
D. ಎಲೀಜಬೆತ್ ರಾಣಿ
15. ಪ್ರವಾದಿಯಾದ ಎಲೀಯನನ್ನು ಕೊಲ್ಲುತ್ತೇನೆಂದು ಹೇಳಿದ ರಾಣಿ ಯಾರು?
A. ಶೆಬದರಾಣಿ
B. ಈಜೆಬೆಲಳು
C. ವಷ್ಟಿ ರಾಣಿ
D. ಎಸ್ತೇರಳು
16. ಅರಸನಾದ ಅಹಷ್ಟೇರೋಷನು ತಳ್ಳಿಹಾಕಿದ ರಾಣಿಯ ಹೆಸರೇನು?
A. ವಷ್ಟಿ ರಾಣಿ
B. ಎಸ್ತೇರ್ ರಾಣಿ
C. ಎಲಿಜಬೆತ್ ರಾಣಿ
D. ಶೀಬಾ ರಾಣಿ
17. ದಾನಿಯೇಲನು ಯಾವ ಯಾವ ರಾಜ್ಯಗಳಲ್ಲಿ ಕೆಲಸ ಮಾಡಿದನು?
A. ಇಸ್ರಾಯೇಲಿನಲ್ಲಿ
B. ಬೆತ್ಲೇಹೇಮ್ ರಾಜ್ಯಗಳಲ್ಲಿ
C. ಬಾಬಿಲೋನ್ ಮತ್ತು ಪಾರಸಿಯ ರಾಜ್ಯಗಳಲ್ಲಿ
D. ಬೇಥಾನ್ಯದಲ್ಲಿ
18. ಇಸ್ರಾಯೇಲ್ಯರ ಎರಡು ರಾಜ್ಯಗಳ ಹೆಸರೇನು?
A. ಐಗುಪ್ತ ರಾಜ್ಯ ಮತ್ತು ಯೆರೂಸಲೇಮ್
B. ಇಸ್ರಾಯೇಲ್ ರಾಜ್ಯ ಮತ್ತು ಯೂದಾಯ ರಾಜ್ಯ
C. ಕಾನಾನ್ ಮತ್ತು ಕೆನಢಾ ರಾಜ್ಯ
D. ಇಸ್ರಾಯೇಲ್ ರಾಜ್ಯ ಮತ್ತು ಫಿಲಿಪೈನ್ಸ್ ರಾಜ್ಯ
19. ಇಸ್ರಾಯೇಲ್ಯರ ಎರಡು ರಾಜ್ಯಗಳ ರಾಜಧಾನಿಗಳ ಹೆಸರೇನು?
A. ಯೆರೂಸಲೇಮ್, ಸಮಾರ್ಯ
B. ಯೆರೂಸಲೇಮ್, ಗಲಿಲಾಯ
C. ಯೆರೂಸಲೇಮ್, ಗೆತ್ಸೇಮನೆ
D. ಯೆರೂಸಲೇಮ್, ಬೆಥಾನ್
20. ಯೇಸು ಹುಟ್ಟಿದಾಗ ಯೆರೂಸಲೇಮಿನಲ್ಲಿದ್ದ ಅರಸನ ಹೆಸರೇನು?
A. ಹೆರ್ಬೋನನು
B. ಹನನ್ಯನು
C. ಹೆರೋದನು
D. ಹಿಜ್ಕೀಯನು
Result: