Bible Quiz in Kannada Topic wise: 65 || ಕನ್ನಡ ಬೈಬಲ್ ಕ್ವಿಜ್ (ಮಹತ್ಕಾರ್ಯಗಳು)

1. ನಾಮಾನನ ಕುಷ್ಠ ರೋಗವನ್ನು ವಾಸಿ ಮಾಡಿದವರು ಯಾರು?
A. ಪ್ರವಾದಿಯಾದ ಎಲೀಯನು
B. ಪ್ರವಾದಿಯಾದ ಎಲೀಷನು
C. ಪ್ರವಾದಿಯಾದ ಸಾಮುವೇಲನು
D. ಪ್ರವಾದಿಯಾದ ಯೆರೇಮಿಯನು
2. ಯಾವ ನಾಯಕತ್ವದಲ್ಲಿ ಯೆರಿಕೋವನ್ನು ಆಶ್ಚರ್ಯಕರವಾದ ರೀತಿಯಲ್ಲಿ ವಶಪಡಿಸಿಕೊಳ್ಳಲಾಯಿತು?
A. ಯೆಹೋಶುವ
B. ದಾವೀದನು
C. ಹಿಜ್ಕೀಯನು
D. ಮೋಶೆ
3. ಕಲ್ಲಿನೊಳಗಿಂದ (ಬಂಡೆ) ನೀರು ಬರುವಂತೆ ಮಾಡಿದ್ದು ಯಾರು?
A. ಯೆಹೋಶುವ
B. ದಾವೀದನು
C. ಹಿಜ್ಕೀಯನು
D. ಮೋಶೆ
4. ದೋರ್ಕಳನ್ನು ಸತ್ತವರೊಳಗಿಂದ ಯಾರು ಎಬ್ಬಿಸಿದರು?
A. ಪೇತ್ರನು
B. ಫಿಲೋಮೋನನು
C. ಪೌಲನು
D. ಅಪೋಲೋಸ್ಸನು
5. ಕರಡಿಗಳು ಹಾಸ್ಯ ಮಾಡುತ್ತಿದ್ದ ಮಕ್ಕಳನ್ನು ಹರಿದುಹಾಕುವಂತೆ ಶಪಿಸಿದವರು ಯಾರು?
A. ಎಲೀಯನು
B. ಎಲ್ಕಾನನು
C. ಎಲೀಷನು
D. ಏಲೀ
6. ಸೂರ್ಯಚಂದ್ರರು ನಿಲ್ಲುವಂತೆ ಯಾರು ಆಜ್ಞಾಪಿಸಿದರು?
A. ಯೆಹೋಶುವನು
B. ಮೋಶೆ
C. ಆರೋನನು
D. ಕಾಲೇಬನು
7. ಯಾಯಿರನ ಮಗಳನ್ನು ಸತ್ತವರೊಳಗಿಂದ ಎಬ್ಬಿಸಿದವರು ಯಾರು?
A. ಯೋಹಾನ
B. ಯಾಕೋಬ
C. ಯೇಸು
D. ಪೇತ್ರ
8. ಯೇಸು ಮಾಡಿದ ಮೊದಲನೆಯ ಸೂಚಕ ಕಾರ್ಯ ಯಾವದು?
A. ಕಾನಾ ಊರಿನಲ್ಲಿ ಮದುವೆಯನ್ನು ಮಾಡಿದ್ದು
B. ಕಾನಾ ಊರಿನಲ್ಲಿ ಕುರುಡನಿಗೆ ಕಣ್ಣು ಕೊಟ್ಟದ್ದು
C. ಕಾನಾ ಊರಿನಲ್ಲಿ ಕಹಿ ನೀರನ್ನು ಸಿಹಿ ಮಾಡಿದ್ದು
D. ಕಾನಾ ಊರಿನಲ್ಲಿ ನೀರನ್ನು ದ್ರಾಕ್ಷಾರಸ ಮಾಡಿದ್ದು
9. ಪೇತ್ರನು ಯೊಪ್ಪದಲ್ಲಿ ಯಾರನ್ನು ಸತ್ತವರೊಳಗಿಂದ ಎಬ್ಬಿಸಿದನು?
A. ತಬಿಥಳನ್ನು
B. ದೊರ್ಕಳನ್ನು
C. ಲಾಜರನನ್ನು
D. ಪಾರ್ಶುವಾಯು ರೋಗಿ
10. ಯೇಸು ನೀರನ್ನು ದ್ರಾಕ್ಷಾರಸ ಮಾಡಿದ್ದು ಎಲ್ಲಿ?
A. ಗಲಿಲಾಯ
B. ಕೊಪ್ಪ
C. ಕಾನಾ
D. ಯೆರೂಸಲೇಮ್
11. ಯೇಸು ಲಾಜರನನ್ನು ಎಬ್ಬಿಸುವ ವರೆಗೆ ಅವನು ಸಮಾಧಿಯಲ್ಲಿ ಎಷ್ಟು ದಿನವಿದ್ದನು?
A. ಮೂರು ದಿವಸ
B. ಎರಡು ದಿವಸ
C. ನಾಲ್ಕು ದಿವಸ
D. ಐದು ದಿವಸ
12. ತನಗೆ ಕಣ್ಣು ಬರುವಂತೆ ಮಾಡಬೇಕೆಂದು ಗಟ್ಟಿಯಾಗಿ ಕೂಗಿ ಯೇಸುವನ್ನು ಬೇಡಿಕೊಂಡವರು ಯಾರು?
A. ಬಾರ್ತಿಲೊಮನು
B. ಬಾರ್ತಿಮಾಯನು
C. ಬಾರ್ನಬನು
D. ಬಾಲಾಕನು
13. ಯೇಸು ಕುರುಡನಿಗೆ ಯಾವ ಕೊಳದಲ್ಲಿ ತೊಳಕೊಳ್ಳಬೇಕೆಂದು ಹೇಳಿದನು
A. ಶಿಲೋವಿನ ಕೊಳದಲ್ಲಿ
B. ಬೆತೆಸ್ಥಾ ಕೊಳದಲ್ಲಿ
C. ರೆಹಬೋತ್ ಕೊಳದಲ್ಲಿ
D. ಯೆರಿಕೋ ಕೊಳದಲ್ಲಿ
14. ನಾಲ್ಕೂ ಸುವಾರ್ತೆಗಳಲ್ಲಿ ಬರೆಯಲ್ಪಟ್ಟಿರುವ ಮಹತ್ಕಾರ್ಯ ಯಾವದು?
A. ಹನ್ನೆರಡು ಸಾವಿರ ಜನರಿಗೆ ಊಟ ಮಾಡಿಸಿದ್ದು
B. ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು
C. ಏಳು ಸಾವಿರ ಜನರಿಗೆ ಊಟ ಮಾಡಿಸಿದ್ದು
D. ಹತ್ತು ಸಾವಿರ ಜನರಿಗೆ ಊಟ ಮಾಡಿಸಿದ್ದು
15. 4000 ಜನರಿಗೆ ಊಟ ಮಾಡಿಸಲು ಯೇಸು ಎಷ್ಟು ರೊಟ್ಟಿಗಳನ್ನು ಉಪಯೋಗಿಸಿದನು?
A. 5 ರೊಟ್ಟಿಗಳು
B. 2 ರೊಟ್ಟಿಗಳು
C. 6 ರೊಟ್ಟಿಗಳು
D. 7 ರೊಟ್ಟಿಗಳು
16. ಯೇಸು ಯಾವ ವಿಧವಾದ ರೋಗಗಳನ್ನು ವಾಸಿ ಮಾಡಿದನು?
A. ಎಲ್ಲಾ ಕುರುಡ ರೋಗಗಳನ್ನು
B. ಎಲ್ಲಾ ಕುಂಟ ರೋಗಗಳನ್ನು
C. ಎಲ್ಲಾ ಪಾರ್ಶ್ವವಾಯು ರೋಗಗಳನ್ನು
D. ಎಲ್ಲಾ ವಿಧವಾದ ರೋಗಗಳನ್ನು
17. ಆಶ್ಛರ್ಯಕರವಾದ ರೀತಿಯಲ್ಲಿ ತೆರಿಗೆ ಕಟ್ಟಲು ಯೇಸು ಯಾವ ಏರ್ಪಾಡು ಮಾಡಿದನು?
A. ಕಾಗೆಯ ಬಾಯಿಯಿಂದ ನಾಣ್ಯ ಸಿಕ್ಕಿತು
B. ಮೀನಿನ ಬಾಯಿಯಿಂದ ನಾಣ್ಯ ಸಿಕ್ಕಿತು
C. ನಾಯಿಯ ಬಾಯಿಯಿಂದ ನಾಣ್ಯ ಸಿಕ್ಕಿತು
D. ಕತ್ತೆಯ ಬಾಯಿಯಿಂದ ನಾಣ್ಯ ಸಿಕ್ಕಿತು
18. ಯೇಸು ಯಾವ ಸ್ಥಳದಲ್ಲಿ ಬಿರುಗಾಳಿಯನ್ನು ಶಾಂತಗೊಳಿಸಿದನು?
A. ಯೆರ್ದಾನ್ ಸಮುದ್ರದಲ್ಲಿ
B. ಕೆಂಪು ಸಮುದ್ರದಲ್ಲಿ
C. ಗಲಿಲಾಯ ಸಮುದ್ರದಲ್ಲಿ
D. ಲವಣ ಸಮುದ್ರದಲ್ಲಿ
19. ಕಾನಾನ್ಯದವಳಾದ ಸ್ತ್ರೀಯ ಮಗಳಿಗೆ ಇದ್ದ ಯಾವ ಖಾಯಿಲೆಯನ್ನು ಯೇಸು ವಾಸಿ ಮಾಡಿದನು?
A. ದೆವ್ವ ಪೀಡಿತ
B. ಕಾಮಾಲೆ ರೋಗ
C. ರಕ್ತಸ್ರಾವ ರೋಗ
D. ಮೂರ್ಛೆ ರೋಗ
20. ಯೇಸು ಪೇತ್ರನ ಅತ್ತೆಯ ಯಾವ ಖಾಯಿಲೆಯನ್ನು ವಾಸಿ ಮಾಡಿದನು?
A. ಕಾಮಾಲೆ ರೋಗವನ್ನು
B. ತಲೆನೋವನ್ನು
C. ಜ್ವರವನ್ನು
D. ರಕ್ತಸ್ರಾವ ರೋಗವನ್ನು
Result: