Bible Quiz in Kannada Topic wise: 38 || ಕನ್ನಡ ಬೈಬಲ್ ಕ್ವಿಜ್ (ನೆರೆ-ಹೊರೆಯವರು)

1. ದೇವರು ಕೊಟ್ಟ ಅಜ್ಞೆಗಳಲ್ಲಿ ಬಹು ಮುಖ್ಯವಾದ ಎರಡನೆಯ ಆಜ್ಞೆ ಯಾವುದು ಎಂದು ಯೇಸು ಹೇಳಿದನು?
ಅ] ನಿಮ್ಮ ಪೂರ್ಣ ಹೃದಯದಿಂದಲೂ ಮತ್ತು ಆತ್ಮದಿಂದಲೂ ಪ್ರೀತಿಸಬೇಕು ಎಂಬುದು
ಬ] ನಿಮ್ಮ ನೆರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕು
ಕ] ನಿಮ್ಮ ತಂದೆ ಮತ್ತು ತಾಯಿಯನ್ನು ಪ್ರೀತಿಸಬೇಕು
ಡ] ಮೇಲಿನವು ಎರಡೂ ತಪ್ಪು
2. ನಿಮ್ಮ ನೆರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕೆಂದು ಹೇಳಿದಾಗ ಯೇಸು ನೆರೆಯವರು ಯಾರು ಎಂದು ಹೇಳಿದನು?
ಅ] ಲೋಕದಲ್ಲಿರುವ ಎಲ್ಲ ಕ್ರೈಸ್ತರನ್ನು
ಬ] ಲೋಕದಲ್ಲಿರುವ ಎಲ್ಲಾರನ್ನು
ಕ] ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರು
ಡ] ಮೇಲಿನವು ಎರಡೂ ತಪ್ಪು
3. ನೆರೆಯವರ ಬಗ್ಗೆ ಯೇಸು ಹೇಳಿದ ನಿಯಮ ಯಾವುದು?
ಅ] ಯಾರಾದರು ಸುವರ್ಣ ದೇವಾಲಯದ ಮೇಲೆ ಆಣೆ ಇಟ್ಟು ಪ್ರಮಾಣ ಮಾಡಿದರೆ, ಅವನು ಆ ಆಣೆಗೆ ಬಂಧಿತನಾಗುತ್ತಾನೆ
ಬ] ಜನರು ನಿಮಗೆ ಏನೇನು ಮಾಡಬೇಕೆಂಬುದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ
ಕ] ನೀವು ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿರಿ ಯಾಕೆಂದರೆ ಅವರ ಹತ್ತಿರ ಬಹಳ ಬಂಗಾರವಿದೆ
ಡ] ಮೇಲಿನವು ಎರಡೂ ತಪ್ಪು
4. ಯೇಸು ತೀರ್ಪು ಮಾಡುವುದರ ಬಗ್ಗೆ ಮತ್ತು ಬೇರೆ ಜನರನ್ನು ಟೀಕೆ ಮಾಡುವುದರ ಬಗ್ಗೆ ಏನು ಹೇಳಿದನು?
ಅ] ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವುದು
ಬ] ಆತ್ಮಕ್ಕೆ ಸರಿಯಾಗಿ ತೀರ್ಪು ಮಾಡಿರಿ
ಕ] ತೀರ್ಪು ಮಾಡುವುದನ್ನು ನ್ಯಾಯಾಲಯಕ್ಕೆ ಬಿಟ್ಟುಬಿಡಿರಿ
ಡ] ಮೇಲಿನವು ಎರಡೂ ತಪ್ಪು
5. ಕೋಪದ ಬಗ್ಗೆ ಹೇಳುವಾಗ ಯೇಸು ಯಾವುದನ್ನು ಹೇಳಲಿಲ್ಲ
ಅ] ಯಾವನಾದರು ಇನ್ನೊಬ್ಬನಿಗೆ “ನೀನು ಮೂರ್ಖ” ಅನ್ನುವವನು ಅಗ್ನಿ ನರಕಕ್ಕೆ ಗುರಿಯಾಗುವನು
ಬ] ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗಿಸು
ಕ] ತನ್ನ ಸಹೋದರನ ಮೇಲೆ ಸಿಟ್ಟುಗಳು ಪ್ರತಿ ಮನುಷ್ಯನು ನ್ಯಾಯ ವಿಚಾರಣೆಗೆ ಗುರಿಯಾಗುವನು
ಡ] ಮೇಲಿನವು ಎರಡೂ ತಪ್ಪು
6. ಯೇಸು ವೈರಿಗಳ ವಿಷಯದಲ್ಲಿ ಏನು ಹೇಳಿದನು?
ಅ] ನಿನ್ನ ನೆರೆಯವರನ್ನು ಪ್ರೀತಿಸು, ಆದರೆ ನಿನ್ನ ವೈರಿಗಳನ್ನು ಹಗೆ ಮಾಡು
ಬ] ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗೆಸು
ಕ] ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ
ಡ] ಮೇಲಿನವು ಎರಡೂ ತಪ್ಪು
7. ಹೆಂಡತಿಯ ಪರಿತ್ಯಾಗದ ವಿಷಯವಾಗಿ ಯೇಸು ಏನು ಹೇಳಿದನು?
ಅ] ಯಾವನದರು ತನ್ನ ಹೆಂಡತಿಯನ್ನು ಪರಿತ್ಯಾಗ ಮಾಡಬೇಕಾದಲ್ಲಿ ಅವಳಿಗೆ ತ್ಯಾಗಪತ್ರವನ್ನು ಬರೆದು ಕೊಡಬೇಕು
ಬ] ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು
ಕ] ಯಾವನಾದರು ತನ್ನ ಹೆಂಡತಿಯನ್ನು ಪರಿತ್ಯಾಗ ಮಾಡಿದರೆ ಅವಳೂ ಕೊಟ್ಟ ವರದಕ್ಷಿಣೆಯನ್ನು ಹಿಂದಕ್ಕೆ ಕೊಡಬೇಕು
ಡ] ಮೇಲಿನವು ಎರಡೂ ತಪ್ಪು
8. ವ್ಯಬಿಚಾರದ ವಿಷಯದಲ್ಲಿ ಯೇಸು ಏನು ಹೇಳಿದನು?
ಅ] ವ್ಯಭಿಚಾರ ಮಾಡುವವನು ಬುದ್ಧಿ ಇಲ್ಲದವನಾಗಿರುತ್ತಾನೆ, ಹಗೆ ಮಾಡುವವನು ತನ್ನ ಆತ್ಮವನ್ನೇ ಹಾಳು ಮಾಡುತ್ತಾನೆ.
ಬ] ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು
ಕ] ಯಾರಾದರು ಮದುವೆಯಾಗದೇ ವ್ಯಭಿಚಾರ ಮಾಡುತ್ತಾರೋ ಅದು ತಪ್ಪು
ಡ] ಮೇಲಿನವು ಎರಡೂ ತಪ್ಪು
9. ಯೇಸು ಎಲ್ಲಾ ಮನುಷ್ಯರಿಗೆ ಮುಂದೆ ಬರಲಿಕ್ಕಿರುವ ನ್ಯಾಯ ತೀರ್ಪಿನ ವಿಷಯವಾಗಿ ತಿಳಿಸಿದನು. ಆತನು ಎರಡು ಗುಂಪುಗಳ ವಿಷಯವಾಗಿ ಮಾತನಾಡಿದನು. ಕಷ್ಟದಲ್ಲಿರುವಂತಹವರಿಗೆ ಸಹಾಯ ಮಾಡಿದ “ಕುರಿಗಳು” ಮತ್ತು ಸಹಾಯ ಮಾಡದೇ ಅಲಕ್ಷ ಮಾಡಿದ “ಆಡುಗಳು”. ಕುರಿಗಳಿಗೆ ಏನಾಯಿತು?
ಅ] ಕುರಿಗಳು ದೇವರ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳುವರು
ಬ] ಅವರು ನೀತಿವಂತರು
ಕ] ಮೇಲಿನವು ಎರಡೂ ಸರಿ
ಡ] ಮೇಲಿನವು ಎರಡೂ ತಪ್ಪು
10. ನಾವು ಜನರು ಮತ್ತು ನಮ್ಮ ನೆರೆ ಹೊರೆಯವರು ನೋಡುವ ಹಾಗೆ ನಮ್ಮ ಧರ್ಮ ಕಾರ್ಯಗಳನ್ನು ಅವರ ಮುಂದೆ ಮಾಡಬಾರದು ಯೇಸು ಯಾವ ಕಾರಣಕ್ಕಾಗಿ ಈ ರೀತಿ ಹೇಳಿದನು?
ಅ] ಹಾಗೆ ಮಾಡಿದರೆ ನಮ್ಮ ಪರಲೋಕದ ತಂದೆಯಿಂದ ಫಲ ದೊರೆಯುವುದಿಲ್ಲ
ಬ] ನೀವು ಜನರಿಂದ ಹೊಗಳಿಸಿಕೊಳ್ಳುತ್ತೀರಿ
ಕ] ಮೇಲಿನವು ಎರಡೂ ಸರಿ
ಡ] ಮೇಲಿನವು ಎರಡೂ ತಪ್ಪು
Result: