Bible Quiz in Kannada Topic wise: 76 || ಕನ್ನಡ ಬೈಬಲ್ ಕ್ವಿಜ್ (ಯೇಸುವಿನ ಮರಣ ಮತ್ತು ಪುನರುತ್ಥಾನ)

1. ಯೇಸುವನ್ನು ಪ್ರಶ್ನಿಸಲು ಮಹಾಯಾಜಕರೂ ಮತ್ತು ಕಾಯಫನು ಆತನನ್ನು ಎಲ್ಲಿಗೆ ಕರೆದುಕೊಂಡು ಹೋದರು?
ಅ]ದೇವಾಲಯಕ್ಕೆ
ಆ]ಕಾಯಫನ ಮನೆಗೆ
ಇ]ಕಿದ್ರೋನ್ ಹಳ್ಳದ ಬಾಗಿಲಿಗೆ
ಈ]ಮೇಲಿನವು ಯಾವುದೂ ಅಲ್ಲ
2. ಲ್ಯಾಟಿನ್ ಭಾಷೆಯಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳಕ್ಕೆ ಕಲ್ವಾರಿ ಎಂದು ಹೇಳುತ್ತಾರೆ. ಆದರೆ ಇಬ್ರಿಯ ಭಾಷೆಯಲ್ಲಿ ಈ ಸ್ಥಳಕ್ಕೆ ಏನು ಹೇಳುತ್ತಾರೆ?
ಅ]ಗೋಲ್ಗೊಥಾ
ಆ]ಗಬ್ಬಥಾ
ಇ]ಗಾಜಾ
ಈ]ಮೇಲಿನವು ಯಾವುದೂ ಅಲ್ಲ
3. ಯೇಸುವಿನ ಗೊಡವೆಗೆ ಹೋಗಬಾರದೆಂದು ಪಿಲಾತನನ್ನು ಎಚ್ಚರಿಸಿದ್ದು ಯಾರು?
ಅ]ನಿಕೋದೇಮನು
ಆ]ಪಿಲಾತನ ಹೆಂಡತಿ
ಇ]ಕರ್ತನ ದೂತನೊಬ್ಬನು
ಈ]ಮೇಲಿನವು ಯಾವುದೂ ಅಲ್ಲ
4. ಯೇಸುವಿಗಾಗಿ ಆತನ ಶಿಲುಬೆಯನ್ನು ಹೊತ್ತುಕೊಂಡು ಹೋಗಲು ಯಾರಿಗೆ ಹೇಳಿದರು?
ಅ]ಅಲೆಗ್ಸಾಂಡರ ಮತ್ತು ರೂಫಸ್
ಆ]ನತಾನಿಯೇಲನು
ಇ]ಕುರೇನೆ ಪಟ್ಟಣದ ಸಿಮೋನನು
ಈ]ಮೇಲಿನವು ಯಾವುದೂ ಅಲ್ಲ
5. ಯೇಸು ಸ್ವಾಮಿಯನ್ನು ಶಿಲುಬೆಗೆ ಹಾಕಿದ ಮೇಲೆ ಯಾವ ಸಮಯಕ್ಕೆ ಭೂಮಿಯ ಮೇಲೆ ಕತ್ತಲೆ ಆವರಿಸಿತು?
ಅ]ಮೂರು ಗಂಟೆಗೆ
ಆ]ಆರು ಗಂಟೆಗೆ
ಇ]ಒಂಭತ್ತು ಗಂಟೆಗೆ
ಈ]ಮೇಲಿನವು ಯಾವುದೂ ಅಲ್ಲ
6. ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಸಮಾಧಿ ಮಾಡಲು ಕೊಡಬೇಕೆಂದು ಯಾರು ಕೇಳಿದರು?
ಅ]ನಿಕೋದೇಮನು
ಆ]ಆತನ ತಾಯಿಯಾದ ಮರಿಯಳು
ಇ]ಅರಿಮಥಾಯದ ಯೋಸೇಫನು
ಈ]ಮೇಲಿನವು ಯಾವುದೂ ಅಲ್ಲ
7. ಈ ಕೆಳಗಿನ ವಾಕ್ಯಗಳಲ್ಲಿ ಯಾವುದು ತಪ್ಪು?
ಅ]ಒಂದು ನೂರು ಪೌಂಡುಗಳಷ್ತು ಸುಗಂಧದ್ರವ್ಯಗಳನ್ನು ಆತನ ದೇಹಕ್ಕೆ ಹಚ್ಚಿದರು.
ಆ]ಯೇಸು ತೀರಿತು ಎಂದು ಹೇಳಿದಾಗ, ಆತನು ನಮ್ಮ ಪಾಪಗಳಿಗಾಗಿ ತಾನು ಸಂಪೂರ್ಣವಾಗಿ ಬೆಲೆ ಕೊಟ್ಟಿದ್ದೇನೆ ಎಂದು ಅರ್ಥ.
ಇ]ಯೇಸುವಿನ ಪಾದದ ಬಳಿ ಸಿಮೋನ ಪೇತ್ರನು ಅತ್ತನು
ಈ]ಮೇಲಿನವು ಯಾವದೂ ಅಲ್ಲ
8. ಸಬ್ಬತ್ ದಿನದ ಬೆಳಗಿನ ಜಾವದಲ್ಲಿ ಯೇಸುವಿನ ಸಮಾಧಿಯ ಬಳಿ ಬಂದ ಮೊದಲನೆಯ ವ್ಯಕ್ತಿ ಯಾರು?
ಅ]ಯೇಸುವಿನ ತಾಯಿಯಾದ ಮರಿಯಳು
ಆ]ಮಗ್ದಲದ ಮರಿಯಳು
ಇ]ಅಪೆÇೀಸ್ತಲರಾದ ಯೋಹಾನ ಮತ್ತು ಪೇತ್ರ
ಈ]ಕ್ಲೋಫನ ಹೆಂಡತಿಯಾದ ಮರಿಯಳ ತಂಗಿ
9. ಪೇತ್ರನು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದನು, ಅವನ ಹೆಸರೇನು?
ಅ]ಕಾಸ್‍ಫ್ಹರನು
ಆ]ಕ್ಲೋಫನು
ಇ]ರೂಫನು
ಈ]ಮಲ್ಕನು
10. ಯೇಸು ಸ್ವರ್ಗಾರೋಹಣಕ್ಕೆ ಮೊದಲು ಎಷ್ಟು ದಿನಗಳ ವರೆಗೆ ತನ್ನ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಿದ್ದನು?
ಅ]ಇಪ್ಪತ್ತೈದು ದಿನಗಳ ವರೆಗೆ
ಆ]ಮೂವತ್ತು ದಿನಗಳ ವರೆಗೆ
ಇ]ನಾಲ್ವತ್ತು ದಿನಗಳ ವರೆಗೆ
ಈ]ಮೇಲಿನವು ಯಾವದೂ ಅಲ್ಲ
Result: