Bible Quiz in Kannada Topic wise: 96 || ಕನ್ನಡ ಬೈಬಲ್ ಕ್ವಿಜ್ (ಸ್ವಪ್ನಗಳು)

1. ಕನಸಿನಲ್ಲಿ ಏಣಿಯನ್ನು ಕಂಡವರು ಯಾರು?
A. ಇಸಾಕನು
B. ದಾನಿಯೇಲನು
C. ಯೋಸೇಫನು
D. ಯಾಕೋಬನು
2. ತನ್ನ ಕನಸಿನಲ್ಲಿ ಸೂರ್ಯ, ಚಂದ್ರ ಮತ್ತು 11 ನಕ್ಷತ್ರಗಳು ತನಗೆ ಅಡ್ಡ ಬೀಳುವದನ್ನು ಕಂಡವರು ಯಾರು?
A. ಇಸಾಕನು
B. ದಾನಿಯೇಲನು
C. ಯೋಸೇಫನು
D. ಯಾಕೋಬನು
3. ಸೆರೆಮನೆಯಲ್ಲಿ ಯೋಸೇಫನು ಮುಖ್ಯ ಪಾನದಾಯಕನ ಮತ್ತು ಮುಖ್ಯ ಭಕ್ಷ್ಯಕಾರನ ಸ್ವಪ್ನಗಳ ಅರ್ಥವನ್ನು ತಿಳಿಸಿದನು. ಇವರಿಬ್ಬರಲ್ಲಿ ಯಾರಿಗೆ ಬಿಡುಗಡೆಯಾಯಿತು ಮತ್ತು ಯಾರು ಗಲ್ಲಿಗೇರಿಸಲ್ಪಟ್ಟನು?
A. ಮುಖ್ಯ ಪಾನನಾಯಕನನ್ನು ಮತ್ತು ಮುಖ್ಯ ಭಕ್ಷಕಾರನನ್ನು ಗಲ್ಲಿಗೇರಿಸಿದನು
B. ಮುಖ್ಯ ಪಾನನಾಯಕನನ್ನು ಮತ್ತು ಮುಖ್ಯ ಖಜಾನೆಕಾರನನ್ನು ಗಲ್ಲಿಗೇರಿಸಿದನು
C. ಮುಖ್ಯ ಕಾವಲುಗಾರನನ್ನು ಮತ್ತು ಮುಖ್ಯ ಭಕ್ಷಕಾರನನ್ನು ಗಲ್ಲಿಗೇರಿಸಿದನು
D. ಮುಖ್ಯ ಖಜಾನೆಕಾರನನ್ನು ಮತ್ತು ಮುಖ್ಯ ಭಕ್ಷಕಾರನನ್ನು ಗಲ್ಲಿಗೇರಿಸಿದನು
4. ತನಗೆ ಬಿದ್ದ ಎರಡು ಸ್ವಪ್ನಗಳ ಅರ್ಥವನ್ನು ತಿಳಿಸಬೇಕೆಂದು ಪರೋಹನು ಯೋಸೇಫನನ್ನು ಕೇಳಿಕೊಂಡನು. ಆ ಎರಡು ಸ್ವಪ್ನಗಳು ಯಾವವು?
A. (ಅ) ಐದು ಕೊಭ್ಭಿದ ಆಕಳುಗಳು ಮತ್ತು ಏಳು ಮೈಯೊಣಗಿದ ಬಡ ಆಕಳುಗಳು (ಬ) ಪುಷ್ಟಿಯುಳ್ಳ ಐದು ತೆನೆಗಳು ಮತ್ತು ಬತ್ತಿಹೋದ ಏಳು ತೆನೆಗಳು
B. (ಅ) ಏಳು ಕೊಭ್ಭಿದ ಆಕಳುಗಳು ಮತ್ತು ಏಳು ಮೈಯೊಣಗಿದ ಬಡ ಆಕಳುಗಳು (ಬ) ಪುಷ್ಟಿಯುಳ್ಳ ಏಳು ತೆನೆಗಳು ಮತ್ತು ಬತ್ತಿಹೋದ ಏಳು ತೆನೆಗಳು
C. (ಅ) ಮೂರು ಕೊಭ್ಭಿದ ಆಕಳುಗಳು ಮತ್ತು ಮೂರು ಮೈಯೊಣಗಿದ ಬಡ ಆಕಳುಗಳು (ಬ) ಪುಷ್ಟಿಯುಳ್ಳ ಆರು ತೆನೆಗಳು ಮತ್ತು ಬತ್ತಿಹೋದ ಏಳು ತೆನೆಗಳು
D. (ಅ) ಎಂಟು ಕೊಭ್ಭಿದ ಆಕಳುಗಳು ಮತ್ತು ಎಂಟು ಮೈಯೊಣಗಿದ ಬಡ ಆಕಳುಗಳು (ಬ) ಪುಷ್ಟಿಯುಳ್ಳ ಎಂಟು ತೆನೆಗಳು ಮತ್ತು ಬತ್ತಿಹೋದ ಏಳು ತೆನೆಗಳು
5. ದೇವರು ಸ್ವಪ್ನದಲ್ಲಿ ಒಬ್ಬ ಯುವಕಣಿಗೆ ಕಾಣಿಸಿಕೊಂಡು “ನಿನಗೆ ಯಾವ ವರ ಬೇಕು ಕೇಳಿಕೋ” ಎಂದು ಹೇಳಿದನು. ಆ ಯುವಕನು ಯಾರು?
A. ಸೊಲೊಮೋನನು
B. ಸೌಲನು
C. ಸಾಮೂವೇಲನು
D. ದಾವೀದನು
6. ಒಬ್ಬ ರಾಜನು ಕನಸ್ಸನ್ನು ಕಂಡು ಅದನ್ನು ಮರೆತು ಬಿಟ್ಟನು. ದಾನಿಯೇಲನು ಅದರ ಅರ್ಥ ತಿಳಿಸಿದನು. ಆ ರಾಜನ ಹೆಸರೇನು?
A. ನೆಬುಕದ್ನೆಚರನು
B. ಕೋರೇಶನು
C. ನಾಮಾನನು
D. ನತಾಯೇಲನು
7. ಮದುವೆ ಮಾಡಿಕೋ ಎಂದು ದೇವದೂತನು ಕನಸಿನಲ್ಲಿ ಯಾರಿಗೆ ಹೇಳಿದನು? (ಹೊಸ ಒಡಂಬಡಿಕೆಯಲ್ಲಿ)
A. ಯೋಸೇಫನು ಮರಿಯಳನ್ನು ಮದುವೆ ಮಾಡಿಕೊಳ್ಳಬೇಕೆಂದು ಹೇಳಿದನು
B. ಜೆಕರ್ಯನು ಎಲಿಜಬೇತಳನ್ನು ಮದುವೆ ಮಾಡಿಕೊಳ್ಳಬೇಕೆಂದು ಹೇಳಿದನು
C. ಯೋಸೇಫನು ಮಾರ್ಥಳನ್ನು ಮದುವೆ ಮಾಡಿಕೊಳ್ಳಬೇಕೆಂದು ಹೇಳಿದನು
D. ಯೋಸೇಫನು ಮಗ್ದಲದ ಮರಿಯಳನ್ನು ಮದುವೆ ಮಾಡಿಕೊಳ್ಳಬೇಕೆಂದು ಹೇಳಿದನು
8. ಕನಸನ್ನು ಕಂಡ ಮೇಲೆ ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಯಾರು ಹೊರಟು ಹೋದರು?
A. ಪಡುವಣ ದೇಶದ ಜೋಯಿಸರು
B. ತೆಂಕಣ ದೇಶದ ಜೋಯಿಸರು
C. ದಕ್ಷಿಣ ದೇಶದ ಜೋಯಿಸರು
D. ಮೂಡಣ ದೇಶದ ಜೋಯಿಸರು
9. ಒಬ್ಬ ದೇಶಾಧಿಪತಿಯ ಹೆಂಡತಿ ತನ್ನ ಗಂಡನಿಗೆ “ನಾನು ಕನಸಿನಲ್ಲಿ ಆತನ ದೆಸೆಯಿಂದ ಬಹಳ ತೊಂದರೆ ಪಟ್ಟೆನು. ಆ ಸತ್ಪುರುಷನ ಗೊಡವೆಗೆ ಹೋಗಬೇಡ” ಎಂದು ಹೇಳಿ ಕಳುಹಿಸಿದರು. ಆ ಅಧಿಕಾರಿ ಯಾರು?
A. ಪೌಲನು
B. ಫಿಲೊಮೋನನು
C. ಪಿಲಾತನು
D. ಪೇತ್ರನು
10. ಪ್ರತಿ ಸಾರಿ ಕನಸು ಕಂಡಾಗ ಕಳವಳ ಪಡುತ್ತಿದ್ದ ರಾಜನು ಯಾರು?
A. ನೆಬುಕದ್ನೆಚರನು
B. ಕೋರೇಶನು
C. ನಾಮಾನನು
D. ನತಾಯೇಲನು
Result: