Bible Quiz in Kannada Topic wise: 81 || ಕನ್ನಡ ಬೈಬಲ್ ಕ್ವಿಜ್ (ರಾತ್ರಿ ನಡೆದ ಘಟನೆಗಳು)

1. ಪೇತ್ರನು ಸೆರೆಮನೆಯಲ್ಲಿದ್ದಾಗ ಯಾರು ಬಂದು ಅವನನ್ನು ಬಿಡುಗಡೆ ಮಾಡಿದರು?
A. ಕರ್ತನ ದೂತನು
B. ಸೈತಾನನು
C. ದೇವರು
D. ಸಭೆಯವರು
2. ಚಿಕ್ಕ ಹುಡುಗನಾದ ಸಮುವೇಲನನ್ನು ರಾತ್ರಿಯ ಸಮಯದಲ್ಲಿ ಯಾರು ಕರೆದರು?
A. ದೇವದೂತನು
B. ದೇವರು
C. ಸೈತಾನನು
D. ಏಲೀ
3. ನಡು ರಾತ್ರಿಯಲ್ಲಿ ತನ್ನ ಶಿಷ್ಯರು ಭಯಪಡುವಂತೆ ಅವರ ಮುಂದೆ ಹಾದು ಹೋದವರು ಯಾರು?
A. ಶಿಷ್ಯರಲ್ಲೊಬ್ಬನು
B. ದೇವದೂತನು
C. ಸೈತಾನನು
D. ಯೇಸು ಕ್ರಿಸ್ತನು
4. ಮಿದ್ಯಾನ್ಯರ ವಸತಿಯನ್ನು ರಾತ್ರಿಯಲ್ಲಿ ಯಾರು ಆಕ್ರಮಿಸಿಕೊಂಡರು?
A. ಗೆಹಜಿಯನು
B. ಗಿದ್ಯೋನನು
C. ಗೋಚ್ಸರನು
D. ಗೋಲ್ಯಾತನು
5. ಯೇಸುವನ್ನು ಸಂಧಿಸಲು ರಾತ್ರಿಯಲ್ಲಿ ಬಂದ ಫರಿಸಾಯನು ಯಾರು?
A. ನಿಕೋದೇಮನು
B. ನಿಕೋಲಸ್ಸನನು
C. ನಾಮಾನನು
D. ನತನಾಯೇಲನು
6. ಒಬ್ಬ ದೇವದೂತನು ರಾತ್ರಿಯಲ್ಲಿ ಬಂದು “ನೀವು ಹೆದರಬೇಡಿ ನೀವೆಲ್ಲರೂ ಸುರಕ್ಷಿತರಾಗಿರುವಿರಿ, ಬಿರುಗಾಳಿಗೆ ಸಿಕ್ಕದೆ ಈ ಹಡಗು ಬಂದು ದಡ ಸೇರುತ್ತದೆ” ಎಂದು ಯಾರಿಗೆ ಹೇಳಿದನು?
A. ಸ್ತೆಫನನು
B. ಸೌಲನು
C. ಪೌಲನು
D. ಫಿಲಾತನು
7. ರಾತ್ರಿಯ ಸಮಯದಲ್ಲಿ ಯೇಸುವನ್ನು ನಿಡಿಯಲು ಸಿಪಾಯಿಗಳನ್ನೂ, ಯಾಜಕರನ್ನು ಮತ್ತು ಫರಿಸಾಯರನ್ನು ಕರೆದು ತಂದವರು ಯಾರು?
A. ಮತ್ತಾಯ
B. ಯೋಹಾನ
C. ಪೇತ್ರ
D. ಇಸ್ಕರಿಯೋತ ಯೂದನು
8. ಇಡೀ ರಾತ್ರಿ ಒಬ್ಬ ಮನುಷ್ಯನು ದೇವದೂತನೊಡನೆ ಹೋರಾಡಿದನು? ಅವನು ಯಾರು?
A. ಯಾಕೋಬನು
B. ಇಸಾಕನು
C. ಅಬ್ರಹಾಮನು
D. ಯೋಸೇಫನು
9. ಕುರುಬರು ರಾತ್ರಿಯ ಸಮಯದಲ್ಲಿ ದೇವದೂತರನ್ನು ಎಲ್ಲಿ ನೋಡಿದರು?
A. ಮರುಭೂಮಿಯಲ್ಲಿ
B. ಬೆಟ್ಟದಲ್ಲಿ
C. ಹೊಲದಲ್ಲಿ
D. ನದಿಯಲ್ಲಿ
10. ರಾತ್ರಿಯಲ್ಲಿ ಯಾರು ಬಂದು ಐಗುಪ್ತರ ಪ್ರತಿ ಮನೆಯಲ್ಲಿದ್ದ ಚೊಚ್ಚಲು ಮಗನನ್ನು ಕೊಂದರು?
A. ಯೆಹೋವನು
B. ಸೈತಾನನು
C. ವೈರಿ
D. ಮೋಶೆ
Result: