Bible Quiz in Kannada Topic wise: 97 || ಕನ್ನಡ ಬೈಬಲ್ ಕ್ವಿಜ್ (ಹೆಸರುಗಳು)

1. ನನ್ನ ತಂದೆ ನನ್ನನ್ನು ಬಲಿಕೊಡಲಿದ್ದನು, ಆದರೆ ಕಡೇ ಗಳಿಗೆಯಲ್ಲಿ ದೇವರು ಒದಗಿಸಿದನು. ನಾನು ಯಾರು?
A. ಯೋಸೇಫನು
B. ಇಸ್ಮಾಯೇಲನು
C. ಇಸಾಕನು
D. ಎಸಾವ
2. ನನ್ನ ತಂಗಿ ಮರಿಯಳು, ತಮ್ಮ ಲಾಜರನು, ನಾನು ಯಾರು?
A. ಮಾರ್ಥಳು
B. ಸಾರಳು
C. ಮಗ್ದಲದ ಮರಿಯಳು
D. ಎಲೀಜಬೇತಳು
3. ನಾನು ದೇವರ ವಾಕ್ಯವನ್ನು ಸಾರಿದ್ದರಿಂದ ನನ್ನನ್ನು ಕಲ್ಲೆಸೆದು ಕೊಂದರು.
A. ಸಿಂಸೋನನು
B. ಸಾಮುವೇಲನು
C. ಸೌಲನು
D. ಸ್ತೆಫನನು
4. ನಾನೊಬ್ಬ ಫರಿಸಾಯನು, ಹಿರೀ ಸಭೆಯ ಸದಸ್ಯನು, ಯೇಸು ಸ್ವಾಮಿಯನ್ನು ಸಂದರ್ಶಿಸಲು ರಾತ್ರಿಯ ಹೊತ್ತು ಹೋದೆನು. ನಾನು ಯಾರು?
A. ಯಾಕೋಬನು
B. ನತನಾಯೇಲನು
C. ನಿಕೋದೇಮನು
D. ಲಾಬಾನನು
5. ನಾನು ಇಸ್ರಾಯೇಲ್ಯರ ಎರಡನೆಯ ರಾಜನು. ನಾನು ಯಾರು?
A. ದಾನಿಯೇಲನು
B. ದಾವೀದನು
C. ದರ್ಯಾವೇಷನು
D. ಸೌಲನು
6. ರಾತ್ರಿ ನನ್ನನ್ನು ಬುಟ್ಟಿಯಲ್ಲಿಟ್ಟು ಕೆಳಗಿಳಿಸಿ ಪಾರು ಮಾಡಿದರು. ನಾನು ಯಾರು?
A. ಪೇತ್ರನು
B. ಸೀಲನು
C. ಸೌಲನು
D. ಪೌಲನು
7. ನನ್ನ ಹೆಂಡತಿ ನನ್ನನ್ನು ಬಿಟ್ಟು ಓಡಿ ಹೋದಳು. ಅವಳನ್ನು ಹುಡುಕಿ ವಾಪಸ್ಸು ಮನೆಗೆ ಕರೆದುಕೊಂಡು ಬಂದೆನು. ನಾನು ಯಾರು?
A. ಹೋಶೇಯನು
B. ಯೇಶಾಯನು
C. ಯೆರೇಮಿಯನು
D. ಹಿಜ್ಕೀಯನು
8. ನಾನು ಪ್ರತಿದಿನ ಮೂರು ಸಾರಿ ಪ್ರಾರ್ಥನೆ ಮಾಡುತ್ತಿದ್ದೆನು.
A. ದಾವೀದನು
B. ದಾನಿಯೇಲನು
C. ದರ್ಯಾವೇಷನು
D. ಯೆಹೋಶುವನು
9. ನಾನು 40 ವರ್ಷಗಳ ವರೆಗೆ ಇಸ್ರಾಯೇಲ್ಯರ ನಾಯಕನಾಗಿದ್ದೆನು.
A. ಹೋಶೆಯು
B. ಅಮ್ರಾಮನು
C. ಮೋಶೆಯು
D. ಯೆಹೋಶುವನು
10. ನಾನು ಸಿರಿಯ ದೇಶದ ಸೇನಾಪತಿಯಾದರೂ ಕುಷ್ಠರೋಗಿಯಾಗಿದ್ದೆನು.
A. ನತನಾಯೇಲನು
B. ನಾಮಾನನು
C. ನೆಬುಕ್ದನೇಚ್ಚರನು
D. ನಿಕೋದೋಮನು
Result: