Bible Quiz in Kannada Topic wise: 77 || ಕನ್ನಡ ಬೈಬಲ್ ಕ್ವಿಜ್ (ಯೋನನು)

1. ಯೆಹೋವನು ಯೋನನನ್ನು ಪ್ರವಾದಿಯಾಗಲು ಕರೆದಾಗ ಅವನು ಯೊಪ್ಪಕ್ಕೆ ಇಳಿದು ಅಲ್ಲಿಂದ ತಾರ್ಷೀಷಿಗೆ ತೆರಳುವ ಹಡಗನ್ನು ಹತ್ತಿದನು ಯಾಕೆ?
ಅ] ಅವನು ಪ್ರವಾದಿಯಾದ ಎಲೀಯನನ್ನು ಸಂಧಿಸಲು ಹೋಗುತ್ತಿದ್ದನು
ಬ] ಅವನು ಅಪೋಸ್ತಲನಾದ ಪೌಲನನ್ನು ಸಂಧಿಸಲು ಹೋಗುತ್ತಿದ್ದನು
ಕ] ಅಸೀರಿಯ ಸೈನ್ಯದವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು
ಡ] ಅವನು ದೇವರಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದನು
2. ಯೋನನು ಪ್ರಯಾಣ ಮಾಡುತ್ತಿದ್ದ ಹಡಗಿಗೆ ಏನಾಯಿತು?
ಅ] ಒಂದು ದೊಡ್ಡ ಬಿರುಗಾಳಿ ಸಮುದ್ರದ ಮೇಲೆ ಬೀಸಲು ಹಡಗು ಒಡೆದು ಹೋಗುವ ಹಾಗಾಯಿತು.
ಬ] ಅಸ್ಸೀರಿಯದವರು ಅದನ್ನು ವಶಪಡಿಸಿಕೊಂಡು ಪ್ರಯಾಣ ಮಾಡಿದರು
ಕ] ಸಮುದ್ರದ ಕಳ್ಳರು ಅದರೊಳಗೆ ನುಗ್ಗಿದರು
ಡ] ಸಮುದ್ರದ ದೊಡ್ಡ ಮೀನೊಂದು ಬಂದು ತನ್ನ ಬಾಲದಿಂದ ಹೊಡೆಯಿತು
3. ಯೋನನು ಹೇಗೆ ಸಮುದ್ರದ ಪಾಲಾದನು?
ಅ] ಸಮುದ್ರವು ಬಿರುಗಾಳಿಯಿಂದ ಅಲ್ಲಕಲ್ಲೋಲವಾಗಿ ಅವರನ್ನು ಎದುರಿಸಿದ್ದರಿಂದ ಯೋನನನ್ನು ಹಡಗಿನಿಂದ ಎತ್ತಿ ಸಮುದ್ರದಲ್ಲಿ ಹಾಕಿದರು
ಬ] ಅವನನ್ನು ಕೊಲ್ಲಲು ಪ್ರಯತ್ನ ಮಾಡುತ್ತಿದ್ದ ಜನರಿಂದ ತಪ್ಪಿಸಿಕೊಳ್ಳಲು ಅವನು ಸಮುದ್ರದೊಳಗೆ ಧುಮುಕಿದನು
ಕ] ನಾವಿಕರು ಅವನನ್ನು ಹಡಗಿನಿಂದ ಎತ್ತಿ ಎಸೆದರು
ಡ] ದೇವರು ಸಮುದ್ರದ ಮೇಲೆ ಕಳುಹಿಸಿದ ಬಿರುಗಾಳಿ ಅವನನ್ನು ಸಮುದ್ರಕ್ಕೆ ತಳ್ಳಿ ಹಾಕಿತು
4. ಯೋನನು ಒಣ ನೆಲದ ಮೇಲೆ ಮತ್ತೆ ಹೇಗೆ ಬಂದನು?
ಅ] ಅವನು ಒಂದು ದೊಡ್ಡ ಮೀನಿನ ಮೇಲೆ ಸವಾರಿ ಮಾಡುತ್ತಾ ಸಮುದ್ರದ ದಡವನ್ನು ಸೇರಿದನು
ಬ] ಮೂರು ದಿನಗಳಾದ ಮೇಲೆ ದೇವರು ಮೀನಿಗೆ ಅಪ್ಪಣೆ ಕೊಡಲು, ಅದು ಅವನನ್ನು ದಡದ ಮೇಲೆ ಕಾರಿ ಬಿಟ್ಟಿತು
ಕ] ಅವನು ಮೂರು ದಿನಗಳು ಮತ್ತು ಮೂರು ರಾತ್ರಿ ಈಜುತ್ತಾ ಬಂದು ತಾರ್ಷೀಷನ್ನು ತಲುಪಿದನು
ಡ] ಅವನು ಒಡೆದು ಹಾಳಾಗಿದ್ದ ಹಡಗಿನ ತುಂಡನ್ನು ಹಿಡಿದುಕೊಂಡು ದಡವನ್ನು ಸೇರಿದನು
5. ಅವನ ಈ ಸಾಹಸ ಕಾರ್ಯವಾದ ಮೇಲೆ ದೇವರು ಯೋನನನ್ನು ನಿನೆವೆ ಎಂಬ ದೊಡ್ಡ ಪಟ್ಟಣಕ್ಕೆ ಕಳುಹಿಸಿದನು. ಯೋನನು ನಿನೆವೆಯ ಜನರಿಗೆ ಏನೆಂದು ಸಾರ ತೊಡಗಿದನು?
ಅ] ದೇವರ ರಾಜ್ಯವು ಹತ್ತಿರದಲ್ಲಿದೆ, ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪ ಪಡಿರಿ
ಬ] ದುಷ್ಟತನದಿಂದ ತುಂಬಿರುವ ನಿನೆವೆ ಪಟ್ಟಣವೇ! ನಿನ್ನ ಸಂಕಟಗಳು ಬಹಳ
ಕ] ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು
ಡ] ಕರ್ತನಾದ ದೇವರು ಒಬ್ಬನೇ, ಆತನ ಮುಂದೆ ನಿಮಗೆ ಬೇರೆ ದೇವರುಗಳಿರಬಾರದು
6. ಯೋನನ ಸಂದೇಶವನ್ನು ಕೇಳಿಸಿಕೊಂಡ ನಿನೆವೆಯ ಅರಸನು ಏನು ಮಾಡಿದನು?
ಅ] ಅವನು ಯೋನನಿಗೆ ತಮ್ಮ ಪಟ್ಟಣವನ್ನು ಬಿಟ್ಟು ಹೋಗಬೇಕೆಂದು ಮತ್ತು ಹಿಂದಿರುಗಿ ಬರಬಾರದೆಂದು ಅಪ್ಪಣೆ ಕೊಟ್ಟನು
ಬ] ಅರಸನು ಮತ್ತು ಅವನ ಸೇನಾಧಿಕಾರಿಗಳು ಯೋನನನ್ನು ಒಬ್ಬ ಹರಟೆ ಮಾತನಾಡುವವನೆಂದು ಹಾಸ್ಯ ಮಾಡಿದರು
ಕ] ಪ್ರತಿಯೊಬ್ಬನ್ನು ತನ್ನ ತನ್ನ ದುರ್ಮಾರ್ಗವನ್ನು ಮತ್ತು ಹಿಂಸೆಯನ್ನು ತೊರೆದು ಬಿಡಬೇಕು
ಡ] ಒಂದು ದೇವಾಲಯವನ್ನು ಕಟ್ಟಿ ಯೋನನ ದೇವರನ್ನು ಆರಾಧಿಸಬೇಕೆಂದು ತನ್ನ ಜನರಿಗೆ ಆಜ್ಞಾಪಿಸಿದನು
7. ದೇವರು ನಿನೆವೆ ಪಟ್ಟಣ ಮತ್ತು ಅದರಲ್ಲಿದ್ದ ಜನರಿಗೆ ಏನು ಮಾಡಿದನು?
ಅ] ದೇವರು ನಿನೆವೆ ಪಟ್ಟಣವನ್ನು ಮತ್ತು ಅಲ್ಲಿ ವಾಸವಾಗಿದ್ದ ಜನರನ್ನೂ ಸುಂಟರಗಾಳಿ ಮತ್ತು ಗಂಧಕದಿಂದ ನಾಶ ಮಾಡಿದನು
ಬ] ಆತನು ಭೂಕಂಪದ ಮೂಲಕ ನಿನೆವೆ ಪಟ್ಟಣವನ್ನು ಮತ್ತು ಅದರಲ್ಲಿದ್ದ ಜನರನ್ನೂ ನಾಶ ಮಾಡಿದನು
ಕ] ನಿನೆವೆ ಪಟ್ಟಣದವರು ಮಾನಸಾಂತರ ಪಟ್ಟದ್ದರಿಂದ ದೇವರು ಅವರನ್ನು ನಾಶ ಮಾಡದೆ ಉಳಿಸಿದನು
ಡ] ಆತನು ನಿನೆವೆ ಪಟ್ಟಣವನ್ನು ಮೊದಲಿಗಿಂತ ಇನ್ನೂ ದೊಡ್ಡ ಪಟ್ಟಣವನ್ನಾಗಿ ಮಾಡಿದನು.
8. ಯೋನನು ನಿನೆವೆಯವರಿಗೆ ದೇವರ ಸಂದೇಶವನ್ನು ಕೊಟ್ಟ ನಂತರ ಅವನು ಏನು ಮಾಡಿದನು?
ಅ] ಅವನು ಪಟ್ಟಣವನ್ನು ಬಿಟ್ಟು ತನಗಾಗಿ ಒಂದು ಗುದಿಸಲನ್ನು ಮಾಡಿಕೊಂದು ನಿನೆವೆ ಪಟ್ಟಣಕ್ಕೆ ಏನು ಮಾಡುವನೋ ಎಂದು ಕಾಯ್ದುಕೊಂಡು ನೋದುತ್ತಾ ಇದ್ದನು
ಬ] ಅವನು ತಾರ್ಷೀಷಿಗೆ ದೇವರ ಸಂದೇಶವನ್ನು ಕೊಡಲು ಹೋದನು
ಕ] ಅವನು ಯೊಪ್ಪಕ್ಕೆ ದೇವರ ಸಂದೇಶವನ್ನು ಕೊಡಲು ಹೋದನು
ಡ] ಅವನು ತನ್ನ ಮನೆಗೆ ಹೋಗಲು ಅಪ್ಪಣೆ ಕೊಡಬೇಕೆಂದು ದೇವರನ್ನು ಬೇಡಿಕೊಂಡನು
9. ಯೋನನಿಗೆ ಬುದ್ಧಿ ಕಲಿಸಲು ಯೆಹೋವನು ಏನು ಮಾಡಿದನು?
ಅ] ದೇವರು ಯೋನನಿಗೆ ಔತಣವನ್ನು ಸಿದ್ಧಪಡಿಸಿದನು
ಬ] ದೇವರು ಯೋನನನ್ನು ಒಂದು ದೊಡ್ಡ ಬೆಟ್ಟದ ಮೇಲೆ ಕರೆದುಕೊಂದು ಹೋದನು
ಕ] ಯೋನನು ಸೋರೆ ಗಿಡಕ್ಕಾಗಿ ಸಿಟ್ಟುಗೊಂಡಾಗ ದೇವರು “ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರ ಪಡಬಾರದೇ” ಅಂದನು
ಡ] ದೇವರು ಯೋನನಿಗೆ ಔತಣವನ್ನು ಸಿದ್ಧಪಡಿಸಿದನು
10. ಯೋನನ ಪುಸ್ತಕದಿಂದ ನಾವು ಕಲಿಯುವ ಮುಖ್ಯ ಪಾಠವೇನು?
ಅ] ದೇವರು ತನ್ನ ಜನರ ನಡುವೆ ಪಾಪವನ್ನು ಸಹಿಸುವುದಿಲ್ಲ
ಬ] ದೇವರು ಆರಿಸಿಕೊಂಡ ಇಸ್ರಾಯೇಲ್ ಜನಾಂಗವು ಶ್ರೇಷ್ಠವಾದದ್ದು
ಕ] ದೇವರ ದೃಷ್ಟಿಯಲ್ಲಿ ಎಲ್ಲಾ ಜನಾಂಗಗಳು ಸಮಾನರು, ದೇವರ ಕಣಿಕರವು ಎಲ್ಲಾ ಜನರ ಮೇಲಿದೆ.
ಡ] ದೇವರು ತನ್ನ ಜನರ ನಡುವೆ ಪಾಪವನ್ನು ಸಹಿಸುವುದಿಲ್ಲ
Result: