Bible Quiz in Kannada Topic wise: 85 || ಕನ್ನಡ ಬೈಬಲ್ ಕ್ವಿಜ್ (ವಸ್ತ್ರಗಳು)

1. ನಮ್ಮ ಕರ್ತನಾದ ದೇವರು ಯಾವ ವಸ್ತ್ರವನ್ನು ಧರಿಸಿದ್ದಾನೆ?
A. ಪ್ರಭಾವ ಮಹತ್ವಗಳು
B. ಪ್ರಭಾವ ಪರಾಕ್ರಮಗಳು
C. ಅಪ್ರಭಾವ ಮಹತ್ವಗಳು
D. ಅಪ್ರಭಾವ ಪರಾಕ್ರಮಗಳು
2. ದೇವದೂತರು ಯಾವ ವಿಧವಾದ ವಸ್ತ್ರವನ್ನು ಧರಿಸುತ್ತಾರೆ?
A. ಕಪ್ಪು ನಿಲುವಂಗಿ
B. ಬೂದಿ ನಿಲುವಂಗಿ
C. ಬಿಳೀ ನಿಲುವಂಗಿ
D. ಕೆಂಪು ನಿಲುವಂಗಿ
3. ಆದಾಮ ಹವ್ವಳಿಗೆ ದೇವರು ಯಾವ ವಿಧವಾದ ವಸ್ತ್ರ ಮಾಡಿ ಕೊಟ್ಟನು?
A. ಎಲೆಗಳ ಅಂಗಿಗಳು
B. ಚರ್ಮದ ಅಂಗಿಗಳು
C. ನಾರುಮಡಿಯ ಅಂಗಿಗಳು
D. ಕಾಟನ್ ಅಂಗಿಗಳು
4. ಮರಿಯಳು ತನ್ನ ಶಿಶುವಾದ ಯೇಸುವಿಗೆ ಗೋದಲಿಯಲ್ಲಿ ಏನು ತೊಡಿಸಿದಳು?
A. ಹುಲ್ಲುಗಳಲ್ಲಿ ಸುತ್ತಿದಳು
B. ಎಲೆಗಳಲ್ಲಿ ಸುತ್ತಿದಳು
C. ಬಟ್ಟೆಯಲ್ಲಿ ಸುತ್ತಿದಳು
D. ಚರ್ಮದಲ್ಲಿ ಸುತ್ತಿದಳು
5. ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಚಿಕ್ಕ ಮಗನಿಗಾಗಿ ಒಬ್ಬ ತಾಯಿ ಪ್ರತಿ ವರ್ಷ ಒಂದು ಅಂಗಿಯನ್ನು ತೆಗೆದುಕೊಂಡು ಹೋಗುತ್ತಿದ್ದಳು. ಆಕೆಯು ಯಾರು? B
A. ಮೋಶೆಯ ತಾಯಿ ಯಾಕೆಬೆದಳು
B. ಸಮುವೇಲನ ತಾಯಿ ಹನ್ನ
C. ಯೇಸುವಿನ ತಾಯಿ ಮರಿಯಳು
D. ಯೋಹಾನನ ತಾಯಿ ಎಲೀಜಬೇತಳು
6. ಯೇಸು ಯಾವ ವಿಧವಾದ ನಿಲುವಂಗಿಯನ್ನು ತೊಡುತ್ತಿದ್ದನು?
A. ಅಖಂಡವಾಗಿ ಹೆಣೆಯದ ನಿಲುವಂಗಿ
B. ಸಾಮಾನ್ಯವಾಗಿ ಹೆಣೆದ ಅಂಗಿ
C. ಅಸಾಮಾನ್ಯವಾಗಿ ಹೆಣೆದ ಅಂಗಿ
D. ಅಖಂಡವಾಗಿ ಹೆಣೆದ ಅಂಗಿ
7. ಸ್ನಾನಿಕನಾದ ಯೋಹಾನನು ಯಾವ ವಿಧವಾದ ವಸ್ತ್ರ ತೊಡುತ್ತಿದ್ದನು?
A. ಒಂಟೆ ಕೂದಲಿನ ಹೊದಿಕೆ
B. ಕುದುರೆ ಕೂದಲಿನ ಹೊದಿಕೆ
C. ಹುಲಿ ಕೂದಲಿನ ಹೊದಿಕೆ
D. ಕುರಿ ಕೂದಲಿನ ಹೊದಿಕ
8. ಬಡವರಿಗಾಗಿ ಬಟ್ಟೆಗಳನ್ನು ಮಾಡಿಕೊಡುತ್ತಿದ್ದ ಸ್ತ್ರೀ ಯಾರು?
A. ಮರಿಯಳು
B. ದೊರ್ಕಳು
C. ಎಲಿಜಬೆತಳು
D. ಎಸ್ತೇರಳು
9. ತನ್ನ ಅಂಗಿಯ ಕೊರಳ ಪಟ್ಟಿಯ ವಿಷಯ ಯಾರು ಮಾತಾಡಿದರು?
A. ಸ್ನಾನಿಕನಾದ ಯೋಹಾನ
B. ಯೂದ
C. ಯೋಬ
D. ಯೇಸು
10. ಖರ್ಜೂರದ ಗರಿಗಳ ಭಾನುವಾರ ಜನರು ಖರ್ಜೂರದ ಎಲೆಗಳಿಲ್ಲದೇ ಬೇರೆ ಯಾವದನ್ನು ಆತನು ಹೋಗುವ ದಾರಿಯಲ್ಲಿ ಹಾಸಿದರು?
A. ತಮ್ಮ ಬಟ್ಟೆಗಳನ್ನು
B. ತಮ್ಮ ಹಣವನ್ನು
C. ತಮ್ಮ ದವಸಧಾನ್ಯವನ್ನು
D. ತಮ್ಮಲಿದ್ದ ಹೂವುಗಳನ್ನು
Result: