Bible Quiz in Kannada Topic wise: 10 || ಕನ್ನಡ ಬೈಬಲ್ ಕ್ವಿಜ್ (ಈ ಧೈರ್ಯವಂತರು ಯಾರು?)

1➤ ಅವನ ಆಯುಧಗಳನ್ನು ಹೊರುವ ಸೇವಕರು ಅವನೊಂದಿಗೆ ಗಟ್ಟಾ ಹತ್ತಿದರು ಮತ್ತು ಶತ್ರುಗಳ ತಂಡದಲ್ಲಿ ಇಪ್ಪತ್ತು ಜನರನ್ನು ಒಪ್ಪೋತ್ತಿನಲ್ಲಿ ಕೊಂದರು, ಅವರು ಯಾರು?

1 point

2➤ ಈತನು ಮಿದ್ಯಾನರು ಮತ್ತು ಅಮಾಲೇಕ್ಯರ ದೊಡ್ಡ ಸೈನ್ಯವನ್ನು ತನ್ನ 300 ಜನ ಸೈನಿಕರೊಡನೆ ಸಂಹರಿಸಿದನು, ಈತನು ಯಾರು?

1 point

3➤ ಈತನು ಅರಿಯೇಲನ ಇಬ್ಬರು ಬಲಿಷ್ಠ ಮಕ್ಕಳನ್ನು ಕೊಂದನು ಮತ್ತು ಇನ್ನೊಮ್ಮೆ ಹಿಮ ಕಾಲದಲ್ಲಿ ಒಂದು ಸಿಂಹವು ಗುಂಡಿಯಲ್ಲಿ ಬಿದ್ದಿರಲು ಇವರು ಆ ಗುಂಡಿಗೆ ಇಳಿದು ಅದನ್ನು ಕೊಂದನು, ಅವನು ಯಾರು?

1 point

4➤ ಒಂದು ವಿಪತ್ತಿನಿಂದ ಹದಿನಾಲ್ಕು ಸಾವಿರದ ಏಳುನೂರು ಮಂದಿ ಸತ್ತಾಗ ಮೋಶೆಯ ಆಜ್ಞೆಯಂತೆ ಒಬ್ಬ ಯಾಜಕನು ಘೋರ ವ್ಯಾಧಿಯಿಂದ ನರಳುತ್ತಿದ್ದ ಜನರ ಮಧ್ಯೆ ಧೂಪಾರತಿಯನ್ನು ತೆಗೆದುಕೊಂದು ಓಡಿದಾಗ ಆ ವ್ಯಾಧಿ ಶಮನವಾಯಿತು ಈ ಯಾಜಕನು ಯಾರು?

1 point

5➤ ಅರಸನು ಕರಿಸಿದ ಹೊರತು ಅವನ ಸನ್ನಿಧಿಗೆ ಹೋಗುವವರು ಮರಣದಂಡನೆಗೆ ಪಾತ್ರರಾಗುವರು ಎಂಬ ನಿಯಮ ತಿಳಿದಿದ್ದರು ಧೈರ್ಯದಿಂದ ರಾಜನ ಎದುರಿನ ಪ್ರಾಕಾರದಲ್ಲಿ ನಿಂತಲು ಈಕೆ ಯಾರು?

1 point

6➤ ರಾಜನು ನಿಬಂಧನ ಶಾಸನಕ್ಕೆ ರುಜು ಹಾಕಿದನೆಂದು ತಿಳಿದಾಗ ಈತನು ತನ್ನ ಮನೆಗೆ ಹೋಗಿ ಪ್ರಾರ್ಥನೆ ಮಾಡಿದನು ಈತನು ಯಾರು?

1 point

7➤ ಟೊಬೀಯನು ಮತ್ತು ಸನ್ಭಲ್ಲಟನು ತನ್ನು ಕೊಲ್ಲಬೇಕೆಂದಿದ್ದರೆ ಎಂದು ಗೊತ್ತಾದರೂ ಪವಿತ್ರ ಸ್ಥಾನಕ್ಕೆ ಹೋಗಿ ಪ್ರಾಣ ಉಳಿಸಿಕೊಳ್ಳಲು ಇಷ್ಟಪಡಲಿಲ್ಲ ಈತನು ಯಾರು?

1 point

8➤ ಯೇಸು ಸ್ವಾಮುಯು ಮೃತನಾದ ಮೇಲೆ ಪಿಲಾತನ ಬಳಿಗೆ ಧೈರ್ಯದಿಂದ ಹೋಗಿ ಯೇಸುವನ್ನು ಸಮಾಧಿ ಮಾಡಲು ಅಪ್ಪಣೆ ಕೇಳಿದವರು ಯಾರು?

1 point

9➤ ಫಿಲಿಷ್ಟಿಯರ ಒಂದು ದೊಡ್ಡ ಗುಂಪು ಒಂದು ಅಲಸಂದಿಯ ಹೊಲಕ್ಕೆ ದಾಳಿ ಮಾಡಲು ಬಂದಾಗ ಅಲ್ಲಿದ್ದ ಇಸ್ರಾಯೇಲ್ಯರು ಓಡಿ ಹೋದರು ಆದರೆ ಒಬ್ಬನು ಹೊಲದ ಮಧ್ಯದಲ್ಲಿ ಫಿಲಿಸ್ಟಿಯರನ್ನು ಕೊಂದು ಹೊಲವನ್ನು ಕಾಪಾಡಿದನು, ಅವನು ಯಾರು?

1 point

10➤ ಶತ್ರುಗಳ ರಣಶೂರನನ್ನು ಈತನು ತನ್ನ ಕವಣೆಯಿಂದ ಕಲ್ಲನ್ನು ಬೀಸಿ ಹೊಡೆದು ಕೊಂದನು, ಈತನು ಯಾರು?

1 point

You Got