Bible Quiz in Kannada Topic wise: 63 || ಕನ್ನಡ ಬೈಬಲ್ ಕ್ವಿಜ್ (ಮಕ್ಕಳು)

1. ಒಬ್ಬ ಪ್ರಸಿದ್ಧ ರಾಜನು ತನ್ನನ್ನು “ಇನ್ನೂ ಚಿಕ್ಕವನು” ಎಂದು ಕರೆದುಕೊಂಡನು. ಆ ರಾಜನ ಹೆಸರೇನು?
A. ದಾವೀದನು
B. ಸಂಸೋನನು
C. ಸೊಲೊಮೋನನು
D. ಸಾಮುವೇಲನು
2. ತನ್ನ ಮಗನು ಹುಟ್ಟಿದಾಗ ಯಾರಿಗೆ ನೂರು ವರ್ಷ ವಯಸ್ಸಾಗಿತ್ತು?
A. ಅಬ್ರಹಾಮನು
B. ಯಾಕೋಬನು
C. ಇಸಾಕನು
D. ಯೋಸೇಫನು
3. ಯೇಸುವಿಗೆ ನಾಮಕರಣವಾದಾಗ ಆತನಿಗೆಷ್ಟು ವಯಸ್ಸಾಗಿತ್ತು?
A. ಒಂದು ತಿಂಗಳು
B. ಎಂಟು ದಿನಗಳು
C. ಹತ್ತು ದಿನಗಳು
D. ಎಂಟು ತಿಂಗಳು
4. ಇಸ್ರಾಯೇಲ್ಯರನ್ನು ಆಳಿದ ಎಲ್ಲರಿಗಿಂತ ಚಿಕ್ಕ ಅರಸನು ಯಾರು?
A. ದಾವೀದನು
B. ಸೋಲೋಮೋನನು
C. ನೆಬುಕ್ದನೇಚರ್
D. ಯೆಹೋವಾಷನು
5. ಹೊಸ ಒಡಂಬಡಿಕೆಯಲ್ಲಿ ವೇದ ಪಾರಂಗತನಾದ ಒಬ್ಬ ಹುಡುಗನಿದ್ದನೆಂದು ಹೇಳಲಾಗಿದೆ. ಆ ಹುಡುಗನು ಯಾರು?
A. ತಿಮೋಥಿಯನು
B. ಪೌಲನು
C. ಪೇತ್ರನು
D. ಯಾಕೋಬನು
6. ಹಳೆಯ ಒಡಂಬಡಿಕೆಯಲ್ಲಿ ಏಳು ಸಾರಿ ಸೀನಿದ ಹುಡುಗನು ಯಾರು?
A. ಹನ್ನಳ ಮಗ
B. ಶೂನೇಮ್ಯಳ ಮಗ
C. ರೆಬೇಕಾಳ ಮಗ
D. ರೂತಳ ಮಗ
7. ಸತ್ತವರೊಳಗಿಂದ ಯೇಸು ಎಬ್ಬಿಸಿದ ಹುಡುಗಿಯ ಹೆಸರೇನು?
A. ಮೊರ್ದೆಕೈನ ಮಗಳು
B. ಶತಾಧಿಪತಿಯ ಮಗಳು
C. ಯಾಯೀರನ ಮಗಳು
D. ಜೆಕರೀಯನ ಮಗಳು
8. ರಾಜಾಜ್ಞೆಯಂತೆ ತನ್ನ ಸ್ವಂತ ಮಗನನ್ನು ಸಾಕಿದ್ದಕ್ಕಾಗಿ ಯಾವ ತಾಯಿಗೆ ಸಂಬಳ ಸಿಕ್ಕಿತು?
A. ಸಾಮುವೇಲನ ತಾಯಿ ಹನ್ನಳು
B. ಮೋಶೆಯ ತಾಯಿ ಯಾಕೆಬೆದಳು
C. ಯಾಕೋಬನ ತಾಯಿ ರೆಬೇಕಳು
D. ಯೋಸೇಫನ ತಾಯಿ ರಾಹೇಳಲು
9. ಕುಷ್ಟ ರೋಗದಿಂದ ನರಳುತ್ತಿದ್ದ ಸೇನಾಪತಿಗೆ ಪ್ರವಾದಿಯಾದ ಎಲೀಷನನ್ನು ಕಾಣಬೇಕೆಂದು ತಿಳಿಸಿದವರು ಯಾರು?
A. ಒಬ್ಬ ಚಿಕ್ಕ ಹುಡುಗ
B. ಒಬ್ಬ ಚಿಕ್ಕ ಹುಡುಗಿ
C. ಒಬ್ಬ ದೊಡ್ಡ ಹುಡುಗ
D. ಒಬ್ಬ ದೊಡ್ಡ ಹುಡುಗಿ
10. ಐದು ಸಾವಿರ ಜನರಿಗೆ ಊಟ ಮಾದಿಸಲು ಯೇಸುವಿಗೆ ಐದು ರೊಟ್ಟಿ ಎರಡು ಮೀನುಗಳನ್ನು ಕೊಟ್ಟವರು ಯಾರು?
A. ಒಬ್ಬ ಚಿಕ್ಕ ಹುಡುಗ
B. ಒಬ್ಬ ಚಿಕ್ಕ ಹುಡುಗಿ
C. ಒಬ್ಬ ದೊಡ್ಡ ಹುಡುಗ
D. ಒಬ್ಬ ದೊಡ್ಡ ಹುಡುಗಿ
11. ಅರಸನಾದ ದಾವೀದನ ಮನೆಯಲ್ಲಿ ಜೀವಿಸುತ್ತಿದ್ದ ಕುಂಟ ರಾಜಕುಮಾರನ ಹೆಸರೇನು?
A. ಸೋಲೋಮೋನನು
B. ಅಬ್ಶಾಲೋಮನು
C. ಮೆಫೀಬೋಶೆತನು
D. ಸಂಸೋನನು
12. ದೇವಾಲಯದಲ್ಲಿ ರಾತ್ರಿಯ ಸಮಯದಲ್ಲಿ ಯಾವ ಹುಡುಗನೊಂದಿಗೆ ದೇವರು ಮಾತನಾಡಿದನು?
A. ಯೋಸೇಫನು
B. ದಾವೀದನು
C. ಸೊಲೋಮೋನನು
D. ಸಾಮುವೇಲನು
Result: