Bible Quiz in Kannada Topic wise: 62 || ಕನ್ನಡ ಬೈಬಲ್ ಕ್ವಿಜ್ (ಭೋಜನ ಸಮಾರಂಭಗಳು)

1. ಔತಣಕ್ಕಿಂತ ಉತ್ತಮವಾದ ಊಟ ಯಾವದು?
A. ಪ್ರೇಮವಿರುವಲ್ಲಿ ಮಾಂಸದ ಊಟ
B. ಪ್ರೇಮವಿರುವಲ್ಲಿ ಸೊಪ್ಪಿನ ಊಟ
C. ಪ್ರೇಮವಿರುವಲ್ಲಿ ಮುದ್ದೆಯ ಊಟ
D. ಪ್ರೇಮವಿರುವಲ್ಲಿ ಗಂಜಿಯ ಊಟ
2. ತನ್ನ ಮಗನು ಮನೆಗೆ ಹಿಂತಿರುಗಿದಾಗ ಔತಣ ಮಾಡಿಸಿದ ತಂದೆ ಯಾರು?
A. ತಪ್ಪಿಹೋದ ಮಗನ ತಂದೆ
B. ಓಡಿಸಿದ ಮಗನ ತಂದೆ
C. ಕಳ್ಳನ ಮಗನ ತಂದೆ
D. ಸುಳ್ಳುಗಾರನ ಮಗನ ತಂದೆ
3. ಹೆರೋದ್ಯಳ ಮಗಳು ಯಾವ ಸಂದರ್ಭದಲ್ಲಿ ನಾಟ್ಯವಾಡಿದಳು?
A. ಅರಸನಾದ ಹೆರೋದನ ಅರಮನೆಯ ನೂತನ ಪ್ರವೇಶದ ಔತಣದ ಸಮಯ
B. ಅರಸನಾದ ಹೆರೋದನ ಹುಟ್ಟಿದ ಹಬ್ಬದ ಔತಣದ ಸಮಯ
C. ಅರಸನಾದ ಹೆರೋದನ ಪತ್ನಿಯ ಹುಟ್ಟಿದ ಹಬ್ಬದ ಔತಣದ ಸಮಯ
D. ಅರಸನಾದ ಹೆರೋದನ ಮಗಳ ಮದುವೆಯ ಹಬ್ಬದ ಔತಣದ ಸಮಯ
4. ನಮ್ಮ ಕರ್ತನು ಸ್ಥಾಪಿಸಿದ ಭೋಜನಕ್ಕೆ ಇರುವ ಬೇರೆ ಬೇರೆ ಹೆಸರುಗಳು ಯಾವುವು?
A. ಕರ್ತನ ಭೋಜನ, ಕರ್ತನ ಬೆಳಗಿನ ಭೋಜನ, ಯೂಖರಿಸ್ತು
B. ಕರ್ತನ ಭೋಜನ, ಕರ್ತನ ಮಧ್ಯಾಹ್ನದ ಭೋಜನ, ಯೂಖರಿಸ್ತು
C. ಕರ್ತನ ಭೋಜನ, ಕರ್ತನ ಸಂಜೆಯ ಭೋಜನ, ಯೂಖರಿಸ್ತು
D. ಕರ್ತನ ಭೋಜನ, ಕರ್ತನ ರಾತ್ರಿ ಭೋಜನ, ಯೂಖರಿಸ್ತು
5. ಮಾರ್ಥಳು ಯಾವ ಸಂದರ್ಭದಲ್ಲಿ ಯೇಸುವಿಗಾಗಿ ಬೇಥಾನ್ಯದಲ್ಲಿ ಔತಣ ಮಾಡಿಸಿದಳು?
A. ಲಾಜರನನ್ನು ಸತ್ತವರೊಳಗಿಂದ ಎಬ್ಬಿಸಿದಕ್ಕಾಗಿ ಕೃತಜ್ಞತೆಯಿಂದ
B. ಮರಿಯಳನ್ನು ಸತ್ತವರೊಳಗಿಂದ ಎಬ್ಬಿಸಿದಕ್ಕಾಗಿ ಕೃತಜ್ಞತೆಯಿಂದ
C. ಯಾಯೀರನ ಮಗಳನ್ನು ಸತ್ತವರೊಳಗಿಂದ ಎಬ್ಬಿಸಿದಕ್ಕಾಗಿ ಕೃತಜ್ಞತೆಯಿಂದ
D. ಯೋಹಾನನನ್ನು ಸತ್ತವರೊಳಗಿಂದ ಎಬ್ಬಿಸಿದಕ್ಕಾಗಿ ಕೃತಜ್ಞತೆಯಿಂದ
6. ಯಜ್ಞದ ಕುರಿಯಾದಾತನ ವಿವಾಹದ ಔತಣಕ್ಕೆ ಕರೆಸಿಕೊಂಡವರಿಗೆ ಯಾವ ಹೆಸರು ಕೊಡಲ್ಪಟ್ಟಿದೆ?
A. ದೀನರು
B. ಶಾಪಗ್ರಸ್ತರು
C. ಧನ್ಯರು
D. ಭಿಕ್ಷುಕರು
7. ಅರಸನು ಏರ್ಪಡಿಸಿದ ಔತಣಕ್ಕೆ ಬರದೆ ಹೋದ ರಾಣಿ ಯಾರು?
A. ಮೀಕಾ ರಾಣಿ
B. ಎಲಿಜಬೇತ್ ರಾಣಿ
C. ಎಸ್ತೇರ್ ರಾಣಿ
D. ವಷ್ಟಿರಾಣಿ
8. ಯೋಬನ ಮಕ್ಕಳು ಸರದಿಯ ಪ್ರಕಾರ ಏನು ಮಾಡುತ್ತಿದ್ದರು?
A. ಹೊಲ ಮಾರುತ್ತಿದ್ದರು
B. ಮದುವೆ ಮಾಡಿಸುತ್ತಿದ್ದರು
C. ಔತಣ ಮಾಡಿಸುತ್ತಿದ್ದರು
D. ಅಪಹರಿಸುತ್ತಿದ್ದರು
9. ಹೊಸ ಒಡಂಬಡಿಕೆಯಲ್ಲಿರುವ ಒಂದು ಮದುವೆಯ ಔತಣ ಯಾವದು?
A. ಯಜ್ಞದ ಕುರಿಯಾದಾತನ ವಿವಾಹದ ಔತಣ
B. ಕಾನಾನ್ ಊರಿನ ವಿವಾಹದ ಔತಣ
C. ಯಜ್ಞದ ಹೋರಿಯಾದಾತನ ವಿವಾಹದ ಔತಣ
D. ಆದಾಮ-ಹವ್ವಳ ವಿವಾಹದ ಔತಣ
10. ರಾಜನಾದ ಬೇಲ್ಯಚ್ಚರನು ಮಾಡಿಸಿದ ಔತಣ ಸಮಾರಂಭ ನಡೆಯುತ್ತಿದ್ದಾಗ, ಆ ರಾಜನು ಗೋಡೆಯ ಮೇಲೆ ನೋಡಿದ ಬರಹ ಏನಾಗಿತ್ತು?
A. ದೇವದೂತನು ಕೈಗೋಡೆಯ ಮೇಲೆ ಬರೆದದ್ದನ್ನು ಕಂಡನು
B. ಮಾನವ ಕೈಗೋಡೆಯ ಮೇಲೆ ಬರೆದದ್ದನ್ನು ಕಂಡನು
C. ಸೈತಾನನ ಕೈಗೋಡೆಯ ಮೇಲೆ ಬರೆದದ್ದನ್ನು ಕಂಡನು
D. ದೇವರು ಕೈಗೋಡೆಯ ಮೇಲೆ ಬರೆದದ್ದನ್ನು ಕಂಡನು
Result: