Bible Quiz in Kannada Topic wise: 45 || ಕನ್ನಡ ಬೈಬಲ್ ಕ್ವಿಜ್ (ಪಾಪದ ಅರಿಕೆಗಳು)

1. ತನ್ನ ಕತ್ತೆಯನ್ನು ಕೈಕೋಲಿನಿಂದ ಹೊಡೆದ ಮೇಲೆ ಯೆಹೋವನ ದೂತನ ಮುಂದೆ ತಾನು ಪಾಪ ಮಾಡಿದೆ ಎಂದು ಯಾರು ಅರಿಕೆ ಮಾಡಿದರು?
A. ಬೆನ್ಯಾಮಿನನು
B. ಬಾಲಾಕನು
C. ಬಿಳಾಮನು
D. ಬೆಂಜಮೀನನು
2. ಉಪವಾಸವಿದ್ದು ಗೋಣಿತಟ್ಟು ಸುತ್ತಿಕೊಂಡು ಬೂದಿ ಬಳಿದುಕೊಂಡು ಯೆಹೋವನಿಗೆ ಪಾಪವನ್ನರಿಕೆ ಮಾಡಿ ಬಿನ್ನವಿಸಿದ ಪ್ರವಾದಿ ಯಾರು?
A. ದಾನಿಯೇಲನು
B. ದರ್ಯಾವೇಷನು
C. ನೆಬುಕ್ದನೇಚ್ಚರನು
D. ಕೋರೇಷನು
3. ಬೆಳ್ಳಿ ಬಂಗಾರ ಉತ್ತಮವಾದ ನಿಲುವಂಗಿಯನ್ನು ಯುದ್ಧದ ಕೊಳ್ಳೆಯಲ್ಲಿ ಕದ್ದು ಆ ಮೇಲೆ ತನ್ನ ಕಳ್ಳತನವನ್ನು ಅರಿಕೆ ಮಾಡಿದ ಮೇಲೆ ಅವನನ್ನೂ ಮತ್ತು ಅವನ ಕುಟುಂಬದವರೆಲ್ಲರನ್ನೂ ಕಲ್ಲೆಸೆದು ಕೊಂದರು, ಆ ವ್ಯಕ್ತಿ ಯಾರು?
A. ಆಸ್ಸಾಯನು
B. ಅಕಾನನು
C. ಅದಾಮನು
D. ಕಾಲೇಬನು
4. ಇವನು ದೇವಾಲಯದ ಮುಂದೆ ಅಡ್ಡಬಿದ್ದು ಅಳುತ್ತಾ ವಿಜ್ಞಾಪನೆಯನ್ನು, ಪಾಪ ನಿವೇದನೆಯನ್ನು ಮಾಡುತ್ತಿರುವಷ್ಟರಲ್ಲಿ ಇಸ್ರಾಯೇಲ್ಯರು ಕೂಡಿಬಂದು ಅಳುತ್ತಿದ್ದರು ಈ ವ್ಯಕ್ತಿ ಯಾರು?
A. ಹೋಶೇಯನು
B. ದಾನೀಯೇಲನು
C. ಜೆಕರ್ಯನು
D. ಎಜ್ರನು
5. ಸಜೀವವಾಗಿ ಹೋತವನ್ನು ತರಿಸಿ ಅದರ ತಲೆಯ ಮೇಲೆ ತನ್ನ ಎರಡು ಕೈಗಳನ್ನಿಟ್ಟು ಇಸ್ರಾಯೇಲ್ಯರ ಎಲ್ಲಾ ಪಾಪಗಳನ್ನು ಯೇಹೋವನಿಗೆ ಅರಿಕೆ ಮಾಡಿದ ವ್ಯಕ್ತಿ ಯಾರು?
A. ಆಕಾನನು
B. ಆರೋನನು
C. ಅಹಷ್ವರೋಶನು
D. ಅಬ್ಷಾಲೋಮನು
6. “ಹಾಗಾದರೆ ನೀನು ಯಾರು? ಎಲೀಯನೋ?” ಎಂದು ಯಾಜಕರು ಲೇವಿಯರು ಯಾರನ್ನು ಕೇಳಿದರು?
A. ಸ್ನಾನಿಕನಾದ ಯೋಹಾನನು
B. ಸ್ತೆಫನನು
C. ಪೌಲನು
D. ಪೇತ್ರನು
7. ವಿಷಭರಿತ ಸರ್ಪಗಳಿಂದ ಕಚ್ಚಲ್ಪಟ್ಟ ಅನೇಕರು ಸತ್ತು ಹೋದರು, ಆಗ ಇಸ್ರಾಯೇಲ್ಯರು ಯಾರ ಬಳಿಗೆ ಬಂದು ನಾವು ಪಾಪ ಮಾಡಿದ್ದೇವೆ ಎಂದು ಅರಿಕೆ ಮಾಡಿ ನಮಗಾಗಿ ಪ್ರಾರ್ಥಿಸು ಎಂದು ಬೇಡಿಕೊಂಡರು?
A. ಆರೋನ
B. ಕಾಲೇಬ
C. ಯೆಹೋಶುವ
D. ಮೋಶೆ
8. ಯಾವ ರಾಜನು ತನ್ನ ಪಾಪವನ್ನು ಒಬ್ಬ ಪ್ರವಾದಿಯ ಮುಂದೆ ಒಪ್ಪಿಕೊಂಡು ನಂತರ ಅವನ ಮೇಲಂಗಿಯ ಅಂಚನ್ನು ಹಿಡಿದೆಳೆದನು, ಆ ರಾಜನು ಯಾರು?
A. ಸೌಲನು
B. ದಾವೀದನು
C. ಕೋರೇಷನು
D. ನೆಬೂಕದ್ನೇಚ್ಚರನು
9. ಅರಸನಾದ ದಾವೀದನು ಯೋರ್ದನ್ ನದಿಯನ್ನು ದಾಟುತ್ತಿದ್ದಾಗ ತಾನು ಶಪಿಸಿ ಕಲ್ಲೆಸೆದದಕ್ಕಾಗಿ ಪಶ್ಚಾತ್ತಾಪ ಪಟ್ಟು ಕ್ಷಮಾಪಣೆ ಕೋರಿದನು? ಈ ವ್ಯಕ್ತಿ ಯಾರು?
A. ಗೇರನ ಮಗನಾದ ಎಫ್ರಾಹು
B. ಗೇರನ ಮಗನಾದ ಸಿಂಸೋನ
C. ಗೇರನ ಮಗನಾದ ಸಿಮೆಯೋನ
D. ಗೇರನ ಮಗನಾದ ಶಿಮ್ಮಿಯು
10. ಅನೇಕ ಬಾಧೆಗಳು ತನ್ನ ದೇಶಕ್ಕೆ ಸಂಭವಿಸಿದ ಮೇಲೆ ಒಬ್ಬ ರಾಜನು ಮೋಶೆ ಮತ್ತು ಆರೋನರ ಮುಂದೆ ತಾನು ಅಪರಾಧಿ ಎಂದು ಒಪ್ಪಿಕೊಂಡನು, ಆ ರಾಜನು ಯಾರು?
A. ಪರೋಹನು
B. ಕೋರೇಷನು
C. ದರ್ಯಾವೇಷನು
D. ಹೆರೋದನು
Result: