Bible Quiz in Kannada Topic wise: 51 || ಕನ್ನಡ ಬೈಬಲ್ ಕ್ವಿಜ್ (ಪ್ರವಾದಿಗಳು)

1. ಅರಸನಾದ ಸೌಲನನ್ನು ಚಕಿತಗೊಳಿಸಿದ ಪ್ರವಾದಿ ಯಾರು?
A. ಸೋಲೋಮೋನನು
B. ಸಾಮುವೇಲನು
C. ಸೌಲನು
D. ಸೀಮೋನ್ ಪೇತ್ರನು
2. ಎಲೀಯನ ನಂತರ ಬಂದ ಪ್ರಸಿದ್ಧ ಪ್ರವಾದಿ ಯಾರು?
A. ಎಲೀಷನು
B. ಎಲ್ಕಾನನು
C. ಗೆಹಜಿಯನು
D. ಏಲೀ
3. ಯಾವ ಪ್ರವಾದಿಯ ಹೆಂಡತಿ ವ್ಯಭಿಚಾರಿಣಿಯಾಗಿದ್ದಳು
A. ಹಿಜ್ಕೀಯ
B. ಯೆರೇಮಿಯಾ
C. ಮೋಶೆ
D. ಹೋಶೇಯ
4. ಯಾವ ಪ್ರವಾದಿಯ ಬಳಿ ಅವನ ಪ್ರವಾದನೆಗಳನ್ನು ಮತ್ತು ಪ್ರಸಂಗಗಳನ್ನು ಬರೆಯಲು ಒಬ್ಬ ಕಾರ್ಯದರ್ಶಿ ಇದ್ದನು?
A. ಯೆಹೆಜ್ಕೇಲನು
B. ಯೆಹೋಶುವನು
C. ಯೆರೆಮೀಯನು
D. ಯೇಶಾಯನು
5. ಯಾವ ಪ್ರವಾದಿಯನ್ನು ಮಕ್ಕಳು “ಬೋಳು ತಲೆಯವನು” ಎಂದು ಗೇಲಿ ಮಾಡಿದರು?
A. ಎಲೀಯಾಮನು
B. ಎಲ್ಕಾನನು
C. ಎಲೀಯನು
D. ಎಲೀಷನು
6. ಯೆಹೋವನ ಸನ್ನಿಧಿಯಲ್ಲಿದ್ದ ಬಲಿಪೀಠದಿಂದ ತೆಗೆದ ಕೆಂಡದಿಂದ ಯಾವ ಪ್ರವಾದಿಯ ತುಟಿಗಳನ್ನು ಶುದ್ಧಪಡಿಸಲಾಯಿತು?
A. ಯೆಶಾಯನು
B. ಯೆರೆಮೀಯನು
C. ಯೆಹೆಜ್ಕೇಲನು
D. ಯಾಯೀರನು
7. ಒಣಗಿದ ಎಲುಬುಗಳ ಪುನರ್ಜೀವನದ ದರ್ಶನವನ್ನು ಯಾವ ಪ್ರವಾದಿ ನೋಡಿದನು?
A. ಯೆಶಾಯನು
B. ಯೆರೆಮೀಯನು
C. ಯೆಹೆಜ್ಕೇಲನು
D. ಯಾಯೀರನು
8. ದಶಮಾಂಶಗಳನ್ನು ಕೊಡಬೇಕೆಂದು ತಿಳಿಸಿದ ಪ್ರವಾದಿ ಯಾರು?
A. ಜೆಕರ್ಯ
B. ಮಲಾಕಿಯ
C. ಆಮೋಸ
D. ಹೋಶೇಯ
9. ಹಳೆಯ ಒಡಂಬಡಿಕೆಯಲ್ಲಿರುವ ಪುಸ್ತಕಗಳಲ್ಲಿ ಅತೀ ಚಿಕ್ಕ ಪುಸ್ತಕವನ್ನು ಬರೆದ ಪ್ರವಾದಿ ಯಾರು?
A. ಮೀಕಾ
B. ಓಬದ್ಯ
C. ಜೆಕರ್ಯ
D. ಮಲಾಕಿಯ
10. ನಾಲ್ಕು ಕುದುರೆ ಸವಾರರ ದರ್ಶನವನ್ನು ಕಂಡ ಪ್ರವಾದಿ ಯಾರು?
A. ಮೀಕಾ
B. ಓಬದ್ಯ
C. ಜೆಕರ್ಯ
D. ಮಲಾಕಿಯ
11. “ನೀತಿವಂತನೋ ತನ್ನ ನಂಬಿಕೆಯಿಂದಲೇ ಬದುಕುವನು” ಎಂದು ಹೇಳಿದ ಪ್ರವಾದಿ ಯಾರು?
A. ಅಮೋಸ
B. ಹಬಕ್ಕೂಕ
C. ಹೋಶೆಯ
D. ಮೀಕಾ
12. ತಕೋವದ ಕುರುಬರಲ್ಲಿ ಒಬ್ಬನು ಪ್ರವಾದಿಯಾದನು. ಆತನು ಯಾರು?
A. ಹಬಕ್ಕೂಕ
B. ಜೆಕರ್ಯ
C.ಯೋನ
D. ಆಮೋಸ
13. ಯೆರೂಸಲೇಮಿನ ದೇವಾಲಯವನ್ನು ತಿರುಗಿ ಕಟ್ಟಬೇಕೆಂದು ಪ್ರೋತ್ಸಾಹಿಸಿದ ಇಬ್ಬರು ಪ್ರವಾದಿಗಳು ಯಾರು?
A. ಯೋನ, ಹೊಶೇಯ
B. ಹಗ್ಗಾಯ, ಜೆಕರ್ಯ
C.ಯೆರೇಮಿಯಾ, ಯೆಹೆಜ್ಕೇಲ
D. ನೆಹೇಮಿಯಾ, ಆಮೋಸ
14. ಯಾವ ಪ್ರವಾದಿಯನ್ನು ಸಿಂಹಗಳ ಗವಿಗೆ ಹಾಕಿದರು?
A. ಎಲೀಯನು
B. ಸಾಮುವೇಲನು
C. ದಾನಿಯೇಲನು
D. ಎಲೀಷನು
15. ದಾವೀದನು ಮಾಡಿದ ಪಾಪವನ್ನು ಖಂಡಿಸಿದ ಪ್ರವಾದಿ ಯಾರು?
A. ನೆಹೆಮೀಯನು
B. ನಾಮಾನನು
C. ನತಾನಯೇಲನು
D. ನಾತಾನನು
Result: