Bible Quiz in Kannada Topic wise: 11 || ಕನ್ನಡ ಬೈಬಲ್ ಕ್ವಿಜ್ (ಈ ಪ್ರಾರ್ಥನೆಗಳನ್ನು ಮಾಡಿದವರು ಯಾರು?)

1➤ ತನ್ನ ಘೋರ ಪಾಪಕ್ಕಾಗಿ ಪಶ್ಚಾತ್ತಾಪ ಪಟ್ಟು “ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು” ಎಂದು ಯಾರು ಪ್ರಾರ್ಥನೆ ಮಾಡಿದರು?

1 point

2➤ “ಕರ್ತನಾದ ಯೆಹೋವನೇ, ನೀನು ನಿನ್ನ ಮಹಿಮೆಯಿಂದ ರಕ್ಷಿಸಿ ನಿನ್ನ ಭುಜಬಲದಿಂದ ಐಗುಪ್ತ್ಯರಿಂದ ಬಿಡುಗಡೆ ಮಾಡಿದ ನಿನ್ನ ಸ್ವಕೀಯ ಜನರನ್ನು ನಾಶ ಮಾಡಬೇಡ” ಎಂದು ಯಾರು ಪ್ರಾರ್ಥಿಸಿದರು?

1 point

3➤ ಯಥಾ ಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆ ಮಾಡಿ ಸ್ತೋತ್ರ ಸಲ್ಲಿಸುತ್ತಿದ್ದ ವ್ಯಕ್ತಿ ಯಾರು?

1 point

4➤ ಈ ವ್ಯಕ್ತಿಯು ಭಕ್ತನು, ತನ್ನ ಮನೆಯವರೆಲ್ಲರೊಂದಿಗೆ ದೇವರಿಗೆ ಭಯಪಡುತ್ತಿದ್ದನು, ಜನರಿಗೆ ದಾನಧರ್ಮ ಮಾಡುತ್ತಾ ನಿತ್ಯವೂ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದವನು ಯಾರು?

1 point

5➤ ಬೇಸರಗೊಳ್ಳದೇ ಯಾವಾಗ ಪ್ರಾರ್ಥನೆ ಮಾಡುತ್ತಿರಬೇಕೆಂದು ಕಲಿಸಲು ಯಾರ ವಿಷಯದಲ್ಲಿ ಒಂದು ಸಾಮ್ಯವನ್ನು ಹೇಳಿದನು?

1 point

6➤ “ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ?”ಎಂದು ಯಾರು ಪ್ರಾರ್ಥನೆ ಮಾಡಿದರು?

1 point

7➤ “ಯೆಹೋವನೇ, ಕಿವಿಗೊಡು, ಯೆಹೋವನಾದ ನೀನೊಬ್ಬನೇ ದೇವರೂ, ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ಆಗಿರುತ್ತೀ ಎಂಬದನ್ನು ಇವರಿಗೆ ತಿಳಿಯಪಡಿಸು” ಎಂದು ಯಾರು ಪ್ರಾರ್ಥಿಸಿದರು?

1 point

8➤ ಮರಣಕರ ರೋಗದಲ್ಲಿ ಬಿದ್ದ ಅರಸನು ತಾನು ಸಾಯುತ್ತೇನೆಂದು ತಿಳಿದಾಗ ಅತ್ತುಕೊಂಡು ಗೋಡೆಯ ಕಡೆಗೆ ತಿರುಗಿಕೊಂದು ಪ್ರಾರ್ಥಿಸಿದನು, ಆ ರಾಜನು ಯಾರು?

1 point

9➤ “ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು ನನ್ನನ್ನು ತಿರಸ್ಕರಿಸದೇ ಕನಿಕರಪಟ್ಟು ನನಗೊಬ್ಬ ಮಗನನ್ನು ಕೊಡು” ಎಂದು ಯಾವ ಸ್ತ್ರೀ ಪ್ರಾರ್ಥಿಸಿದಳು?

1 point

10➤ ಶೂಲದಂತೆ ತನ್ನ ಶರೀರದಲ್ಲಿ ನಾಟಿ ತೊಂದರೆ ಕೊಡುತ್ತಿದ್ದ ಪೀಡೆಯ ವಿಶಯದಲ್ಲಿ ಅದು ತನ್ನನ್ನು ಬಿಟ್ಟು ಹೋಗಬೇಕೆಂದು ಮೂರು ಸಾರಿ ಯಾವ ವ್ಯಕ್ತಿಯು ಕರ್ತನನ್ನು ಬೇಡಿಕೊಂಡನು?

1 point

You Got